ADVERTISEMENT

ಮಂಗಳೂರು: ಜ.20ರಂದು ಜೀವನಾಡಿ ತರಬೇತಿ ಶಿಬಿರ

​ಪ್ರಜಾವಾಣಿ ವಾರ್ತೆ
Published 5 ಜನವರಿ 2024, 13:40 IST
Last Updated 5 ಜನವರಿ 2024, 13:40 IST

ಮಂಗಳೂರು: ತಲಪಾಡಿ ದೇವಿನಗರದ ಶಾರದಾ ಆಯುರ್ವೇದ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಜ.20ರಂದು ಜೀವನಾಡಿ ತರಬೇತಿ ಶಿಬಿರ ಆಯೋಜಿಸಲಾಗಿದೆ ಎಂದು ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಂ.ಬಿ. ಪುರಾಣಿಕ್ ಹೇಳಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾಡಿ ಪರೀಕ್ಷೆ ಮತ್ತು ಪಂಚಕರ್ಮದಲ್ಲಿ ಪರಿಣತಿ ಹೊಂದಿರುವ, ನಾಡಿ ಪರೀಕ್ಷೆಯಲ್ಲಿ 500ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಮಟ್ಟದ ಕಾರ್ಯಾಗಾರಗಳನ್ನು ನಡೆಸಿರುವ ಸಂಜಯ್ ಕುಮಾರ್ ಪಿ. ಚಾನೆಡ್ ಅವರು ಬೆಳಿಗ್ಗೆ 9ರಿಂದ 5 ಗಂಟೆವರೆಗೆ ಕಾರ್ಯಾಗಾರ ನಡೆಸಿಕೊಡಲಿದ್ದಾರೆ. ಜ.21 ರಂದು ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ ಎಂದರು.

‘ನಾಡಿ ಪರೀಕ್ಷೆಯು ಸಾಂಪ್ರದಾಯಿಕ ರೋಗನಿರ್ಣಯ ತಂತ್ರವಾಗಿದ್ದು, ಅದು ವ್ಯಕ್ತಿಯ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಯೋಗಕ್ಷೇಮದ ಸಮಗ್ರ ಮೌಲ್ಯಮಾಪನ ಮಾಡುತ್ತದೆ’ ಎಂದು ಕಾಲೇಜಿನ ಪ್ರಾಂಶುಪಾಲ ಸಂದೇಶ್ ಬೇಕಲ್ ತಿಳಿಸಿದರು.

ADVERTISEMENT

ಪ್ರಮುಖರಾದ ಸಮೀರ್ ಪುರಾಣಿಕ್, ಡಾ. ಶಶಾಂಕ್, ದಯಾನಂದ ಕಟೀಲ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.