ADVERTISEMENT

ಉಜಿರೆ | ಕಡವೆ ಬೇಟೆ: ಆರೋಪಿಗೆ ನ್ಯಾಯಾಂಗ ಬಂಧನ

​ಪ್ರಜಾವಾಣಿ ವಾರ್ತೆ
Published 8 ಜನವರಿ 2024, 13:35 IST
Last Updated 8 ಜನವರಿ 2024, 13:35 IST
ಆರೋಪಿ ಅಶೋಕ ಕುಮಾರ್ ಮತ್ತು ವಶಪಡಿಸಿಕೊಂಡ ವಸ್ತುಗಳು
ಆರೋಪಿ ಅಶೋಕ ಕುಮಾರ್ ಮತ್ತು ವಶಪಡಿಸಿಕೊಂಡ ವಸ್ತುಗಳು   

ಉಜಿರೆ: ನೆರಿಯ ಗ್ರಾಮದ ಚಾರ್ಮಾಡಿ ಕನಪಾಡಿ ಮೀಸಲು ಅರಣ್ಯದಲ್ಲಿ ಕಡವೆಯನ್ನು ಬೇಟೆಯಾಡಿ ಮಾಂಸವನ್ನು ಮನೆಯಲ್ಲಿ ಇಟ್ಟುಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಅಶೋಕ್‌ ಕುಮಾರ್‌ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಅರಣ್ಯ ಇಲಾಖೆ ಅಧಿಕಾರಿಗಳು ಭಾನುವಾರ ಕಾರ್ಯಾಚರಣೆ ನಡೆಸಿ ಅಶೋಕ ಕುಮಾರ್ ಮತ್ತು ಬೇಟೆಗೆ ಬಳಸಿದ್ದ ಪರಿಕರಗಳನ್ನು ವಶಪಡಿಸಿಕೊಂಡಿದ್ದರು.

ನೆರಿಯ ಗ್ರಾಮದ ಬಯಲು ಕುಲೆನಾಡಿ ಮನೆಯ ಅಶೋಕ ಕುಮಾರನನ್ನು ಸೋಮವಾರ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.

ADVERTISEMENT

ಮತ್ತೊಬ್ಬ ಆರೋಪಿ ನೆರಿಯ ಗ್ರಾಮದ ಬಾಂದಡ್ಕ ಮನೆ ನಿವಾಸಿ ಶೇಷಪ್ಪ ಗೌಡ ತಲೆಮರೆಸಿಕೊಂಡಿದ್ದಾರೆ.

ವಲಯ ಅರಣ್ಯಾಧಿಕಾರಿ ಮೋಹನ ಕುಮಾರ್ ನೇತೃತ್ವದಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ಯತೀಂದ್ರಕುಮಾರ್, ಪಾಂಡುರಂಗ ಕಮತಿ, ಹರಿಪ್ರಸಾದ್, ರಾಜಶೇಖರ್, ಭವಾನಿಶಂಕರ್, ರಾಜೇಶ್, ರವೀಂದ್ರ, ಪೂಜಾ ಹಾಗೂ ಗಸ್ತು ಅರಣ್ಯಪಾಲಕರಾದ ರವಿಜಟ್ಟಿ ಮುಕ್ರಿ, ಪರಮೇಶ್ವರ್, ಅರಣ್ಯ ವೀಕ್ಷಕ ಬಾಲಕೃಷ್ಣ ಗಫೂರ್ ಪ್ರಕರಣದ ಪತ್ತೆಯಲ್ಲಿ ಸಹಕರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.