ಮಂಗಳೂರು: ಲಂಡನ್‌ನ ಕೊವೆಂಟ್ರಿ ವಿಶ್ವವಿದ್ಯಾಲಯದಲ್ಲಿ ಬಿಐಎಂ ಹಾಗೂ ನಿರ್ಮಾಣ ನಿರ್ವಹಣೆಯಲ್ಲಿ ಎಂಎಸ್ಸಿ ಸ್ನಾತಕೋತ್ತರ ಪದವಿ ಪೂರೈಸಿದ ನಗರದ ಬಿಕರ್ನಕಟ್ಟೆಯ ವರುಣ್ ಶೇಣವ ಈಗ ಮತ್ಸ್ಯೋದ್ಯಮಿ.
ಲಾಕ್‌ಡೌನ್ ಕಾರಣ ಹಲವರು ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದರೆ, ವರುಣ್ ಶೇಣವ ಬಿಕರ್ನಕಟ್ಟೆಯಲ್ಲಿ ‘ಕಡಲ್’ ಹೆಸರಿನಲ್ಲಿ ಮತ್ಸ್ಯೋದಮ ಆರಂಭಿಸಿದ್ದು, ಸ್ವಾವಲಂಬನೆಯ ಹೆಜ್ಜೆ ಇಟ್ಟಿದ್ದಾರೆ.
ಕಳೆದ ವರ್ಷವಷ್ಟೇ ಲಂಡನ್‌ನಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಬಂದಿದ್ದ ವರುಣ್ ಅವರ ಸಮೀಪದ ಸಂಬಂಧಿಕರು ತೀರಿಕೊಂಡಿದ್ದರು. ಹೀಗಾಗಿ, ಲಂಡನ್‌ನಲ್ಲಿ ದೊರೆತಿದ್ದ ಉದ್ಯೋಗದ ಅವಕಾಶಕ್ಕೆ ಅವರು ಹೋಗಲು ಸಾಧ್ಯವಾಗಲಿಲ್ಲ. ಆ ಬಳಿಕ ಬೆಂಗಳೂರಿನ ನಿರ್ಮಾಣ ಸಂಸ್ಥೆಯೊಂದು ಉದ್ಯೋಗದ ಸಂದರ್ಶನಕ್ಕಾಗಿ ಆಹ್ವಾನಿಸಿತ್ತು. ಆದರೆ, ಲಾಕ್‌ಡೌನ್ ಪರಿಣಾಮ ಸಂದರ್ಶನಕ್ಕೆ ಹಾಜರಾಗಲು ಆಗಲಿಲ್ಲ.
ಇತ್ತ ಲಾಕ್‌ಡೌನ್ ಪರಿಣಾಮ ಸತತ ಆರು ತಿಂಗಳು ಉದ್ಯೋಗವಿಲ್ಲದೇ ಇರಬೇಕಾಯಿತು. ಆದರೆ, ಇದರಿಂದ ಕಂಗೆಡದ ವರುಣ್ ಶೇಣವ, ಮೀನು ವ್ಯಾಪಾರ ಆರಂಭಿಸಿದ್ದಾರೆ.
‘ಸುಮಾರು ₹4 ಲಕ್ಷ ಬಂಡವಾಳದ ಮೂಲಕ ಮೀನು ವ್ಯಾಪಾರ ಆರಂಭಿಸಿದ್ದೇನೆ. ಗೆಳೆಯರು, ಹಿತೈಷಿಗಳು ಪ್ರೋತ್ಸಾಹ ನೀಡಿದರು. ಇದಕ್ಕೂ ಮೊದಲು ನಾನು ಮೀನು ವ್ಯಾಪಾರಿಗಳ ಜೊತೆ ಉದ್ಯಮದ ಪ್ರಕ್ರಿಯೆಗಳನ್ನು ತಿಳಿದುಕೊಂಡೆನು’ ಎನ್ನುತ್ತಾರೆ ವರುಣ್ ಶೇಣವ.
‘ನಾವು ಮಾರುಕಟ್ಟೆ ದರದಲ್ಲಿ ಮೀನು ನೀಡುವುದು ಮಾತ್ರವಲ್ಲ, ಸ್ವಚ್ಛಗೊಳಿಸಿ, ನೇರವಾಗಿ ಮನೆಗೆ (ಮೊ.9036661232) ತಂದು ಕೊಡುತ್ತೇವೆ’ ಎನ್ನುತ್ತಾರೆ ಅವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.