ADVERTISEMENT

ಮುಡಿಪು: 19 ಗಾಯಕರಿಗೆ ಕನಕ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2024, 13:30 IST
Last Updated 26 ನವೆಂಬರ್ 2024, 13:30 IST
ಡಾ.ವಿದ್ಯಾಭೂಷಣ್ ಅವರೊಂದಿಗೆ ತೀರ್ಪುಗಾರರು
ಡಾ.ವಿದ್ಯಾಭೂಷಣ್ ಅವರೊಂದಿಗೆ ತೀರ್ಪುಗಾರರು   

ಮುಡಿಪು: ‘ಕನಕ ಕೀರ್ತನ ಗಂಗೋತ್ರಿ’ ಕನಕದಾಸರ ಕೀರ್ತನೆಗಳ ಗಾಯನ ಕಾರ್ಯಕ್ರಮದಲ್ಲಿ 19 ಗಾಯಕರು ಮತ್ತು ಮೂರು ತಂಡಗಳಿಗೆ 2024-25ನೇ ಸಾಲಿನ ಕನಕ ಪುರಸ್ಕಾರ ಲಭಿಸಿದೆ.

ಪ್ರೌಢ ಶಾಲಾ ವಿಭಾಗ: ಪ್ರದಯ್ಯ ಶೆಣೈ (ಕೆನರಾ ಸಿಬಿಎಸ್‌ಇ ಸ್ಕೂಲ್‌, ಡೊಂಗರಕೆರೆ, ಮಂಗಳೂರು), ವರ್ಷಿಣಿ ಎಲ್‌ ಕರ್ಕೇರ (ಸಾಗರ್‌ ವಿದ್ಯಾಮಂದಿರ, ಪಡುಬಿದ್ರೆ), ನಿನಾದ ಕೆ. (ಶಾರದಾ ವಿದ್ಯಾಲಯ, ಕೊಡಿಯಾಲ್‌ಬೈಲ್‌, ಮಂಗಳೂರು), ಜಗತ್‌ (ಶಾರದಾ ಗಣಪತಿ ವಿದ್ಯಾಕೇಂದ್ರ, ಪುಣ್ಯಕೋಟಿ)

ಪದವಿಪೂರ್ವ ವಿಭಾಗ: ಆರ್.‌ ಪ್ರತೀಕ್ಷಾ (ಕೆನರಾ ಕಾಲೇಜು, ಮಂಗಳೂರು), ಆತ್ಮಶ್ರೀ (ಅಂಬಿಕಾ ಪದವಿಪೂರ್ವ ವಿದ್ಯಾಲಯ, ಪುತ್ತೂರು), ಪುನೀತ್‌ ಆರ್.‌ ತೊಕ್ಕೊಟ್ಟು (ಭಾರತ್‌ ಪಿಯು ಕಾಲೇಜು, ಉಳ್ಳಾಲ)

ADVERTISEMENT

ಪದವಿ ವಿಭಾಗ: ದೀಪ್ತಿ ಪ್ರಭು (ವಿವೇಕಾನಂದ ಕಾಲೇಜು ಪುತ್ತೂರು), ತನ್ಮಯಿ .ಯು (ವಿವೇಕಾನಂದ ಕಾಲೇಜು ಪುತ್ತೂರು), ಶ್ರೀಲಯ (ನೆಹರು ಮೆಮೋರಿಯಲ್‌ ಕಾಲೇಜು, ಸುಳ್ಯ)

ಸ್ನಾತಕೋತ್ತರ ವಿಭಾಗ:
ಪ್ರಜ್ವಲ್‌ (ಮಂಗಳೂರು ವಿಶ್ವವಿದ್ಯಾನಿಲಯ), ಮೇಧಾ ಎನ್. (ಮಂಗಳೂರು ವಿಶ್ವವಿದ್ಯಾಲಯ), ಮಹೇಂದ್ರ ಶೆಟ್ಟಿ (ಮಂಗಳೂರು ವಿಶ್ವವಿದ್ಯಾನಿಲಯ)

ಅಧ್ಯಾಪಕ ವಿಭಾಗ:
ಸ್ವಾತಿ ಎನ್.ಎಸ್.‌ (ಜಿ.ಎಫ್.ಜಿ.ಸಿ. ಉಪ್ಪಿನಂಗಡಿ), ಅಶ್ವಿನಿ ಸುವರ್ಣ (ಸರಕಾರಿ ಪದವಿ ಪೂರ್ವ ಕಾಲೇಜು, ಪಡುಬಿದ್ರಿ), ಕೆಂಚನಗೌಡ ಪಾಟೀಲ್‌ ( ಶಾರದ ವಿದ್ಯಾನಿಕೇತನ್‌ ಪಿಯು ಕಾಲೇಜು, ತಲಪಾಡಿ, ಮಂಗಳೂರು)

ಅಧ್ಯಾಪಕೇತರ ವಿಭಾಗ:
ರವಿದಾಸ ಕಾರ್ಕಳ (ಭುವನೇಂದ್ರ ಪದವಿ ಕಾಲೇಜು, ಕಾರ್ಕಳ), ಕವಿತ (ಸಿಂಡಿಕೇಟ್‌ ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯ), ಶರಾವತಿ (ಮಹಿಳಾ ಅಧ್ಯಯನ ಕೇಂದ್ರ, ಮಂಗಳೂರು ವಿಶ್ವವಿದ್ಯಾನಿಲಯ)

ಸಾರ್ವಜನಿಕ ವಿಭಾಗ: ಬಂಟರ ಬಳಗ (ಜಪ್ಪಿನ ಮೊಗರು), ಸಪ್ತಸ್ವರ ಕಲಾಕೇಂದ್ರ (ಕೊಣಾಜೆ), ಅಭಿಮನ್ಯು ತಂಡ (ಮಂಗಳೂರು ವಿಶ್ವವಿದ್ಯಾನಿಲಯ, ಹಂಪನಕಟ್ಟೆ)

ಒಟ್ಟು 173 ಅಭ್ಯರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತೀರ್ಪುಗಾರರಾಗಿ ವಿದ್ವಾನ್‌ ಬಾಲಕೃಷ್ಣ ಹೊಸಮನೆ,  ಶ್ರೀಕೃಷ್ಣ ಭಟ್ಟ ಸುಣ್ಣಗುಳಿ, ಬೊಳುವಾರು ರಮಾ ಪ್ರಭಾಕರ್‌, ಮಂಜುಳಾ ಸುಬ್ರಹ್ಮಣ್ಯ, ಸುಚಿತ್ರಾ ಹೊಳ್ಳ ಮತ್ತು ಸಂಧ್ಯಾ ಸತ್ಯನಾರಾಯಣ ಭಾಗವಹಿಸಿದ್ದರು. ಕನಕ ಪುರಸ್ಕಾರವು ಸ್ಮರಣಿಕೆ, ಪ್ರಮಾಣ ಪತ್ರ ಮತ್ತು ₹2 ಸಾವಿರ ನಗದು ಬಹುಮಾನವನ್ನು ಹೊಂದಿದೆ. ಜನವರಿ ತಿಂಗಳಲ್ಲಿ ನಡೆಯುವ ಕನಕಸ್ಮೃತಿ ಕಾರ್ಯಕ್ರಮದಲ್ಲಿ ಪುರಸ್ಕಾರ ನೀಡಲಾಗುವುದು ಎಂದು ಕನಕದಾಸ ಸಂಶೋಧನಾ ಕೇಂದ್ರದ ಸಂಯೋಜಕ ಧನಂಜಯ ಕುಂಬ್ಳೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.