ADVERTISEMENT

ಕಾಂತಾವರ ಯಕ್ಷದೇಗುಲ ಪ್ರಶಸ್ತಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 6 ಜುಲೈ 2024, 13:50 IST
Last Updated 6 ಜುಲೈ 2024, 13:50 IST
ಕುಮಾರ ಗೌಡ
ಕುಮಾರ ಗೌಡ   

ಮೂಡುಬಿದಿರೆ: ಯಕ್ಷದೇಗುಲ ಕಾಂತಾವರದ ವಾರ್ಷಿಕ ಆಟ ಕೂಟ ಬಯಲಾಟ ಸಹಿತ 22ನೇ ಯಕ್ಷೋಲ್ಲಾಸ ಕಾರ್ಯಕ್ರಮವು ಜು.21ರಂದು ಕಾಂತಾವರದಲ್ಲಿ ಜರುಗಲಿದೆ.

ಯಕ್ಷರಂಗದ ಸಿಡಿಲ ಮರಿ ಖ್ಯಾತಿಯ ಪುತ್ತೂರು ದಿ. ಡಾ. ಶ್ರೀಧರ ಭಂಡಾರಿ ಸಂಸ್ಮರಣಾ ಪ್ರಶಸ್ತಿಯನ್ನು ಧರ್ಮಸ್ಥಳ ಮೇಳದ ನಿವೃತ್ತ ಕಲಾವಿದ ನಿಡ್ಲೆ ಗೋವಿಂದ ಭಟ್ ರವರಿಗೆ ಹಾಗೂ ಸವ್ಯಸಾಚಿ ಕಲಾವಿದ ಬಾಯಾರು ದಿ. ಪ್ರಕಾಶ್ಚಂದ್ರ ರಾವ್ ಸಂಸ್ಮರಣಾ ಪ್ರಶಸ್ತಿಯನ್ನು ಸುರತ್ಕಲ್ ಮೇಳದ ನಿವೃತ್ತ ಕಲಾವಿದ ಪುತ್ತಿಗೆ ಕುಮಾರ ಗೌಡ ಅವರಿಗೆ ನೀಡಲು ಸಂಸ್ಥೆಯ ಆಯ್ಕೆ ಸಮಿತಿ ತೀರ್ಮಾನಿಸಿದೆ. ಪ್ರಶಸ್ತಿಯು ₹10 ಸಾವಿರ ನಗದು, ಪುರಸ್ಕಾರ ಒಳಗೊಂಡಿದೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮಹಾವೀರ ಪಾಂಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗೋವಿಂದ ಭಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT