ಮಂಗಳೂರು: ಕರ್ಣಾಟಕ ಬ್ಯಾಂಕ್ ತನ್ನ ಶತಮಾನೋತ್ಸವ ವರ್ಷಾಚರಣೆಯ ಭಾಗವಾಗಿ 15 ಹೊಸ ಶಾಖೆಗಳನ್ನು ತೆರೆಯುವ ಜೊತೆಗೆ ಬ್ಯಾಂಕ್‌ನ ಕಾರ್ಪೊರೇಟ್ ವೆಬ್‌ಸೈಟ್ ಅನ್ನು ಪ್ರಾರಂಭಿಸಿದೆ.
ಕಲ್ಯಾಣ ಪೂರ್ವ, ತಾಲೇಗಾಂವ್-ದಭಾಡೆ (ಮಹಾರಾಷ್ಟ್ರದ ಶಾಖೆಗಳು), ಫರಿದಾಬಾದ್-ಎನ್‍ಐಟಿ (ಹರಿಯಾಣ), ವಿಶಾಖಪಟ್ಟಣಂ- ಪಿಎಂ ಪಾಲೆಂ (ಆಂಧ್ರಪ್ರದೇಶ), ಹನಮಕೊಂಡ (ತೆಲಂಗಾಣ), ತಥಾಗುಣಿ, ಕಲಬುರಗಿ-ವಿಮಾನ ನಿಲ್ದಾಣ ರಸ್ತೆ, ವೇಮಗಲ್, ಪಾಂಡವಪುರ, ಅಕ್ಕಿಆಲೂರು, ರಾಮನಕೊಪ್ಪ, ಕೋಣಂದೂರು, ಗೊಂದಿಚಾಟನಹಳ್ಳಿ, ಮುಚ್ಚೂರು ಮತ್ತು ಸರ್ವೆ (ಕರ್ನಾಟಕ) ಸೇರಿ ಒಟ್ಟು 15 ಕಡೆಗಳಲ್ಲಿ ಶಾಖೆಗಳು ಕಾರ್ಯಾರಂಭ ಮಾಡಿವೆ.
‘ಬ್ಯಾಂಕ್‌ನ ಶತಮಾನೋತ್ಸವ ಸಂಭ್ರಮಾಚರಣೆಯ ಸಂದರ್ಭದಲ್ಲಿ ಹೊಸ ಶಾಖೆಗಳನ್ನು ಪ್ರಾರಂಭಿಸಿರುವುದು ಡಿಜಿಟಲ್ ಮತ್ತು ಭೌತಿಕ ವಿಸ್ತರಣಾ ಕಾರ್ಯತಂತ್ರವನ್ನು ಸಮತೋಲನ ಗೊಳಿಸುತ್ತದೆ. ನಮ್ಮ ಎಲ್ಲ ಯೋಜನೆಗಳು ಓಪನ್ ಬ್ಯಾಂಕಿಂಗ್ ಉಪಕ್ರಮಗಳ ಪ್ರಾರಂಭಿಕ ಹೆಜ್ಜೆಗಳಾಗಿವೆ’ ಎಂದು ಕರ್ಣಾಟಕ ಬ್ಯಾಂಕ್‍ನ ಎಂಡಿ ಹಾಗೂ ಸಿಇಒ ಶ್ರೀಕೃಷ್ಣನ್ ಎಚ್ ತಿಳಿಸಿದ್ದಾರೆ.
ಹೊಸ ವೆಬ್‍ಸೈಟ್ ಪರಿಚಯವು ಗ್ರಾಹಕರ ಅನುಭವವನ್ನು ಉನ್ನತೀಕರಿಸುವಲ್ಲಿ ಮಹತ್ವದ ಪಾತ್ರವಹಿಸಲಿದೆ ಎಂದು ಬ್ಯಾಂಕ್‍ನ ಕಾರ್ಯಕಾರಿ ನಿರ್ದೇಶಕ ಶೇಖರ್ ರಾವ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.