ADVERTISEMENT

ಬಂಟ್ವಾಳ | ಮಳೆಗೆ ಕೊಚ್ಚಿ ಹೋದ‌ ಮೋರಿ; 10 ಮನೆ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 18 ಜುಲೈ 2024, 5:10 IST
Last Updated 18 ಜುಲೈ 2024, 5:10 IST
<div class="paragraphs"><p>ಕೊಳ್ನಾಡು ಗ್ರಾಮದಲ್ಲಿ ಕೊಚ್ಚಿ ಹೋದ ಮೋರಿ</p></div>

ಕೊಳ್ನಾಡು ಗ್ರಾಮದಲ್ಲಿ ಕೊಚ್ಚಿ ಹೋದ ಮೋರಿ

   

ಬಂಟ್ವಾಳ (ದಕ್ಷಿಣ ಕನ್ನಡ): ತಾಲ್ಲೂಕಿನಾದ್ಯಂತ ಬುಧವಾರ ರಾತ್ರಿ ಸುರಿದ ಭಾರೀ ಮಳೆಗೆ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಏರಿಕೆ ಯಾಗಿದೆ.

ಈ ವರ್ಷ ಪ್ರಥಮ ಬಾರಿಗೆ ನೀರಿನ ಮಟ್ಟ 7.8 ಮೀ.ದಾಟಿದೆ. ಪಾಣೆ ಮಂಗಳೂರು ಸಮೀಪದ ಆಲಡ್ಕ ಎಂಬಲ್ಲಿ ಮುಳುಗಡೆ ಭೀತಿ ಎದುರಿಸುತ್ತಿದ್ದ ತಗ್ಗು ಪ್ರದೇಶದ 10 ಮನೆಗಳನ್ನು ಸ್ಥಳಾಂತರಗೊಳಿಸಲಾಗಿದೆ.

ADVERTISEMENT

ಇಲ್ಲಿನಕೊಳ್ನಾಡು ಗ್ರಾಮದ ಸುರಿಬೈಲು-ಖಂಡಿಗ ರಸ್ತೆ ನಡುವಿನ ಕಿರು ಸೇತುವೆಯಡಿ ಅಳವಡಿಸಿದ್ದ ಮೋರಿ ಮಳೆಗೆ ಕೊಚ್ಚಿ ಹೋಗಿದೆ. ಇದರಿಂದಾಗಿ ಸೇತುವೆಯೂ ಕುಸಿದು ಬೀಳುವ ಭೀತಿ ಎದುರಾಗಿದ್ದು, ಸಂಚಾರ ಸ್ಥಗಿತಗೊಳಿಸಲಾಗಿದೆ.

ನೆರೆಭೀತಿ ಪ್ರದೇಶಗಳಲ್ಲಿ ಫೊಟೋ, ಸೆಲ್ಫಿ ತೆಗೆಯಕೂಡದು. ನೆರೆಭೀತಿ ಎದುರಿಸುತ್ತಿರುವ ತಗ್ಗು ಪ್ರದೇಶಗಳ ಜನರು ಸಹಾಯವಾಣಿ ಸಂಪರ್ಕಿಸುವಂತೆ ತಹಶೀಲ್ದಾರ್ ಅರ್ಚನಾ ಭಟ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.