ADVERTISEMENT

ಟೆಂಡರ್‌ ಮೂಲಕವೇ ಕಟೀಲು ಮೇಳದ ಯಕ್ಷಗಾನ: ಮುಜರಾಯಿ ಇಲಾಖೆ ಆದೇಶ

ಹೈಕೋರ್ಟ್‌ ಆದೇಶ ಪಾಲನೆಗೆ ಮುಂದಾದ ಮುಜರಾಯಿ ಇಲಾಖೆ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2019, 2:24 IST
Last Updated 3 ನವೆಂಬರ್ 2019, 2:24 IST
ಕಟೀಲು ಮೇಳದ ಯಕ್ಷಗಾನದ ದೃಶ್ಯ –ಸಂಗ್ರಹ ಚಿತ್ರ
ಕಟೀಲು ಮೇಳದ ಯಕ್ಷಗಾನದ ದೃಶ್ಯ –ಸಂಗ್ರಹ ಚಿತ್ರ   

ಬೆಂಗಳೂರು: ‘ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನದ ಯಕ್ಷಗಾನ ಮೇಳಗಳನ್ನು ಕಾನೂನು ಪ್ರಕಾರ ಟೆಂಡರ್‌ ಪ್ರಕ್ರಿಯೆ ಮೂಲಕವೇ ಆಯೋಜಿಸಬೇಕು’ ಎಂಬ ಹೈಕೋರ್ಟ್‌ ಆದೇಶ ಪಾಲನೆಗೆ ರಾಜ್ಯ ಮುಜರಾಯಿ ಇಲಾಖೆ ಮುಂದಾಗಿದೆ.

ಈ ಕುರಿತಂತೆ ರಾಜ್ಯ ಮುಜರಾಯಿ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ ಕಳೆದ ತಿಂಗಳ 30ರಂದು ಆದೇಶ ಹೊರಡಿಸಿದ್ದು, ‘ಯಕ್ಷಗಾನ ಆಯೋಜನೆ ಮತ್ತು ಅದಕ್ಕಾಗಿ ಶುಲ್ಕ ಸಂಗ್ರಹವು ಯಕ್ಷಗಾನ ಆಯೋಜನೆ ಮತ್ತು ನಿಯಂತ್ರಣ ಹಕ್ಕುಗಳ ನಿಯಮ 40–ಡಿಗೆ ಒಳಪಟ್ಟಿರುತ್ತದೆ. ಆದ್ದರಿಂದ ಸರ್ಕಾರದ ಪೂರ್ವಾನುಮತಿ ಇಲ್ಲದೇ ಯಾವುದೇ ಸ್ವಯಂ ಸೇವಾ ಸಂಘಟನೆ, ಸೇವಾಸಮಿತಿ ಅಥವಾ ಅಭಿವೃದ್ಧಿ ಸಮಿತಿಗಳು ದೇಣಿಗೆ ಪಡೆಯುವುದು ಕಾನೂನು ಬಾಹಿರ’ ಎಂದು ತಿಳಿಸಿದ್ದಾರೆ.

‘ದೇವಾಲಯವು ಮುಜರಾಯಿ ಇಲಾಖೆಯ ‘ಎ’ ದರ್ಜೆ ಸ್ಥಾನಮಾನ ಹೊಂದಿದೆ. ಆದ್ದರಿಂದ ಮೇಳಗಳನ್ನು ಟೆಂಡರ್‌ ಪ್ರಕ್ರಿಯೆಗೆ ಒಳಪಡಿಸಿಯೇ ನಡೆಸಬೇಕು. ಆಡಳಿತ ಮಂಡಳಿಯು ದೇವಿ ಪ್ರಸಾದ್ ಶೆಟ್ಟಿ ಮತ್ತು ದುರ್ಗಾ ಪರಮೇಶ್ವರಿ ಯಕ್ಷಧರ್ಮ ಬೋಧಿನಿ ಚಾರಿಟಬಲ್‌ ಟ್ರಸ್ಟ್‌ ಅಡಿಯಲ್ಲಿ ಶುಲ್ಕ ಸಂಗ್ರಹ ಅಥವಾ ಮೇಳ ನಡೆಸುವುದು ಸಲ್ಲ’ ಎಂದು ತಿಳಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.