ಮೂಲ್ಕಿ: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವದ ಶುಕ್ರವಾರ ರಾತ್ರಿ ಸಂಪನ್ನಗೊಂಡಿತು.
ಲಕ್ಷಾಂತರ ಭಕ್ತರು ದೇವಿಯ ದರ್ಶನ ಪಡೆದರು. ಶುಕ್ರವಾರ ಸಂಜೆ ದೇವರ ಬಲಿ ಉತ್ಸವ ಆರಂಭಗೊಂಡು, ವಸಂತ ಮಂಟಪದಲ್ಲಿ ದುರ್ಗಾ ಪರಮೇಶ್ವರಿಗೆ ಪೂಜೆ ನಡೆಯಿತು. ಬಳಿಕ ಪಲ್ಲಕಿಯಲ್ಲಿ ಎಕ್ಕಾರಿನವರೆಗೆ ತಡರಾತ್ರಿ ಸವಾರಿ ಸಾಗಿ, ವಾಪಸ್ ಬರುವ ಸಂದರ್ಭದಲ್ಲಿ ಸುಮಾರು 18 ಕಟ್ಟೆಗಳಲ್ಲಿ ಕಟ್ಟೆ ಪೂಜೆ ನಡೆದು, ಮುಂಜಾನೆ ದೇವಿ ಕಟೀಲಿಗೆ ಆಗಮಿಸಿದಳು. ಈ ಸಂದರ್ಭ ಶಿಬರೂರು ಕೊಡಮಣಿತ್ತಾಯ ದೇವರ ಭೇಟಿ ಜರುಗಿತು.
ಕಟೀಲಿನಲ್ಲಿ ದೇವಿ ರಥಾರೂಢಳಾಗಿ ಬ್ರಹ್ಮರಥೋತ್ಸವ ನಡೆಯಿತು. ನಂತರ ದೇವರ ಜಳಕವಾಗಿ, ಎರಡು ಮಾಗಣೆಗೆ ಸೇರಿದ ಅತ್ತೂರು ಮತ್ತು ಕೊಡತ್ತೂರು ಗ್ರಾಮಸ್ಥರ ನಡುವೆ ತೂಡೆದಾರ ನಡೆಯಿತು. ತೂಟೆದಾರ ಸೇವೆ ನಡೆಯುವ ‘ಅಗ್ನಿ ಯುದ್ಧ ಸೇವೆ’ ನೋಡಲು ಸಾವಿರಾರು ಜನರು ಸೇರಿದ್ದರು. ತೂಟೆದಾರ ಸೇವೆಯಲ್ಲಿ ಇದುವರೆಗೂ ಗಾಯಗಳಾದ ಘಟನೆಗಳು ನಡೆದಿಲ್ಲ. ಇದು ಇಲ್ಲಿನ ವಿಶೇಷತೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.