ADVERTISEMENT

ಟೋಲ್‌ ಸಿಬ್ಬಂದಿಗೆ ಬೆದರಿಕೆ:ಕೇರಳದ ವ್ಯಕ್ತಿಯ ಬಂಧನ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2019, 16:07 IST
Last Updated 28 ನವೆಂಬರ್ 2019, 16:07 IST
ರಫೀಕ್ ಕೆ.ಎನ್‌.ಪಿ.
ರಫೀಕ್ ಕೆ.ಎನ್‌.ಪಿ.   

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಸುರತ್ಕಲ್‌ ಟೋಲ್‌ ಕೇಂದ್ರದಲ್ಲಿ ಗುರುವಾರ ಮಧ್ಯಾಹ್ನ ಶುಲ್ಕ ನೀಡಲು ನಿರಾಕರಿಸಿ, ಮಹಿಳಾ ಸಿಬ್ಬಂದಿಗೆ ಪಿಸ್ತೂಲ್‌ ತೋರಿಸಿ ಬೆದರಿಕೆ ಹಾಕಿದ್ದ ಕೇರಳದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಕಾಸರಗೋಡು ನಿವಾಸಿ ರಫೀಕ್‌ ಕೆ.ಎನ್‌.ಪಿ. (36) ಬಂಧಿತ ಆರೋಪಿ. ಆರೋಪಿಯು ಗುರುವಾರ ಮಧ್ಯಾಹ್ನ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ. ಮಧ್ಯಾಹ್ನ 2.40ರ ಸುಮಾರಿಗೆ ಟೋಲ್‌ ಗೇಟ್‌ ಬಳಿ ಬಂದಿದ್ದ. ಟೋಲ್‌ ಸಂಗ್ರಹಿಸುತ್ತಿದ್ದ ಮಹಿಳೆ ಹಣ ನೀಡುವಂತೆ ಕೇಳಿದ್ದರು. ಆಗ ಟೋಲ್‌ ನೀಡಲು ನಿರಾಕರಿಸಿದ್ದ ಆರೋಪಿ, ‘ತಾಕತ್ತಿದ್ದರೆ ತೆಗೆದುಕೋ, ಹತ್ತಿರ ಬಂದರೆ ಕೊಂದು ಹಾಕುತ್ತೇನೆ’ ಎಂದು ಪಿಸ್ತೂಲ್‌ ತೋರಿಸಿ ಬೆದರಿಕೆ ಹಾಕಿದ್ದ.

‘ಘಟನೆಗೆ ಸಂಬಂಧಿಸಿದಂತೆ ಟೋಲ್‌ ಕೇಂದ್ರದ ಸಿಬ್ಬಂದಿ ಸುರತ್ಕಲ್‌ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಭಾರತೀಯ ದಂಡ ಸಂಹಿತೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯಿಂದ ನಿಸ್ಸಾನ್‌ ಟೆರೆನೋ ಕಾರು ಮತ್ತು ಕೃತ್ಯಕ್ಕೆ ಬಳಸಿದ ಪಿಟ್ತೂಲ್‌ ವಶಪಡಿಸಿಕೊಳ್ಳಲಾಗಿದೆ’ ಎಂದು ನಗರ ಪೊಲೀಸ್‌ ಕಮಿಷನರ್‌ ಡಾ.‍ಪಿ.ಎಸ್‌.ಹರ್ಷ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.