ADVERTISEMENT

ಸಾಮರಸ್ಯದ ಬದುಕು ಶಾಶ್ವತ : ರಮಾನಾಥ ರೈ

ಪಂಜಿಕಲ್ಲು: ಆಟಿದ ಕೆಸರ್‌ಡ್ ಒಂಜಿ ದಿನ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2022, 4:01 IST
Last Updated 15 ಆಗಸ್ಟ್ 2022, 4:01 IST
ಗಮನ ಸೆಳೆದ ಕಂಬಳ ಮಾದರಿ ಓಟ
ಗಮನ ಸೆಳೆದ ಕಂಬಳ ಮಾದರಿ ಓಟ   

ಬಂಟ್ವಾಳ: ತುಳುನಾಡಿನ ಜನ ಆಷಾಢ ಮಾಸದ ಕಷ್ಟದ ದಿನಗಳಲ್ಲಿಯೂ ನೈಸರ್ಗಿಕ ಆಹಾರ ಪದ್ಧತಿ ಯೊಂದಿಗೆ ಸಾಮರಸ್ಯದ ಬದುಕು ನಡೆಸುತ್ತಿದ್ದ ಬಗ್ಗೆ ಯುವ ಜನತೆಗೆ ತಿಳಿಸುವ ಅಗತ್ಯವಿದೆ ಎಂದು ಆಟಿದ ಕೂಟ ಸಮಿತಿ ಗೌರವಾಧ್ಯಕ್ಷ, ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.

ಇಲ್ಲಿನ ಪಂಜಿಕಲ್ಲು ಬಾಲೇಶ್ವರ ಗರಡಿ ಗದ್ದೆಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಭಾನುವಾರ ನಡೆದ ‘ಆಟಿದ ಕೆಸರ್ ಡ್ ಒಂಜಿ ದಿನ’ ಉದ್ಘಾಟಿಸಿ ಅವರು ಮಾತನಾಡಿದರು.

ಬಂಟ್ವಾಳದ ಮೂಡೂರು ಪಡೂರು ಕಂಬಳ ಸಮಿತಿ ಅಧ್ಯಕ್ಷ ಪಿಯೂಷ್‌ ಎಲ್.ರಾಡ್ರಿಗಸ್ ಕೆಸರುಗದ್ದೆ ಕ್ರೀಡಾಕೂಟಕ್ಕೆ ಕಂಬಳದ ಹೊಸ ರೂಪ ನೀಡಿದ್ದಾರೆ ಎಂದರು.

ADVERTISEMENT

ಆರಂಭದಲ್ಲಿ ಬಾಲೇಶ್ವರ ಜೈನ ಬಸದಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ವರೆಗೆ ನಡೆದ ಮೆರವಣಿಗೆಯಲ್ಲಿ ಕಂಬಳ ಕೋಣ ಮತ್ತು ಕೊಂಬು ಸಹಿತ ಬ್ಯಾಂಡು ವಾದ್ಯ ಗಮನ ಸೆಳೆಯಿತು. ಕೆಸರಿನಲ್ಲಿ ಕಬಡ್ಡಿ ವಾಲಿಬಾಲ್, ಥ್ರೋಬಾಲ್, ಹಗ್ಗ ಜಗ್ಗಾಟ, ಹಿಮ್ಮುಖ ಓಟ, ಲಿಂಬೆ ಚಮಚ, ಸಂಗೀತ ಕುರ್ಚಿ, ಕಂಬಳ ಮಾದರಿ ಓಟ ಜನಾಕರ್ಷಣೆ ಪಡೆಯಿತು. ಸಾವಿರಾರು ಮಂದಿ ಆಟಿ ತಿಂಗಳ ವಿವಿಧ ಬಗೆಯ ತಿಂಡಿ ತಿನಿಸು ಸವಿದರು.

ಸಮಿತಿ ಯ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಜೈನ್, ಸಂಚಾಲಕ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಕೋಶಾಧಿಕಾರಿ ದೇವಪ್ಪ ಕುಲಾಲ್, ಪ್ರಮುಖರಾದ ಸಮಿತಿ ಪ್ರಧಾನ ಕಾರ್ಯದರ್ಶಿ ಸುದರ್ಶನ ಜೈನ್ , ಕೋಶಾಧಿಕಾರಿ ದೇವಪ್ಪ ಕುಲಾಲ್ , ಪ್ರಮುಖರಾದ ಬಿ.ಪದ್ಮಶೇಖರ ಜೈನ್ , ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್.ಮಹಮ್ಮದ್, ಮಮತಾ ಎಸ್.ಗಟ್ಟಿ, ಎಡ್ತೂರು ರಾಜೀವ ಶೆಟ್ಟಿ, ಮಹಮ್ಮದ್ ಶರೀಫ್, ಕೆ.ಮಾಯಿಲಪ್ಪ ಸಾಲ್ಯಾನ್, ಅಬ್ಬಾಸ್ ಆಲಿ, ವಾಸು ಪೂಜಾರಿ, ಸುರೇಶ್ ಜೋರ , ಪ್ರಕಾಶ್ ಕುಮಾರ್ ಜೈನ್ , ಮಹಮ್ಮದ್ ನಂದರಬೆಟ್ಟು, ಆಲ್ಬರ್ಟ್ ಮಿನೇಜಸ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.