ADVERTISEMENT

ಖುಶಿಯೋಂಕಾ ಆಶಿಯನಾ: ಕಿರುಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಲು ಇಲ್ಲಿದೆ ವಿವರ

​ಪ್ರಜಾವಾಣಿ ವಾರ್ತೆ
Published 28 ಜುಲೈ 2021, 3:11 IST
Last Updated 28 ಜುಲೈ 2021, 3:11 IST
‘ವೈ’ ಕಿರುಚಿತ್ರದ ನಿರ್ಮಾಣ ದೃಶ್ಯವನ್ನು ಸಾಂದರ್ಭಿಕ ಚಿತ್ರವಾಗಿ ಬಳಸಲಾಗಿದೆ.
‘ವೈ’ ಕಿರುಚಿತ್ರದ ನಿರ್ಮಾಣ ದೃಶ್ಯವನ್ನು ಸಾಂದರ್ಭಿಕ ಚಿತ್ರವಾಗಿ ಬಳಸಲಾಗಿದೆ.   

ಮಂಗಳೂರು: ಪ್ರಧಾನಮಂತ್ರಿ ಆವಾಸ್ ಯೋಜನೆಯು 6 ವರ್ಷ ಪೂರ್ಣಗೊಳಿಸಿದ ಪ್ರಯುಕ್ತ ‘ಖುಶಿಯೋಂಕಾ ಆಶಿಯನಾ’ ವಿಷಯ ಆಧರಿಸಿ ಕಿರುಚಿತ್ರ ಸ್ಪರ್ಧೆಗಾಗಿ ಆಫ್‍ಲೈನ್ ಅಥವಾ ಆನ್‍ಲೈನ್ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.

‘ಫಲಾನುಭವಿಗಳ ಜೀವನದಲ್ಲಿ ತಂದ ಬದಲಾವಣೆಗಳು’ ಎಂಬ ವಿಷಯದ ಮೇಲೆ ಕಿರುಚಿತ್ರ ಸ್ಪರ್ಧೆಯಲ್ಲಿ ಫಲಾನುಭವಿಗಳು, ವಿದ್ಯಾರ್ಥಿಗಳು, ಯುವಕರು, ಸಂಘ ಸಂಸ್ಥೆಗಳು ಭಾಗವಹಿಸಲು https://pmay-urban.gov.in ವೆಬ್‌ಸೈಟ್‌ನಲ್ಲಿ ನೋಂದಾಯಿಸಿ ಚಿತ್ರೀಕರಿಸಿದ ಕಿರುಚಿತ್ರವನ್ನು ಗೂಗಲ್ ಪ್ಲೇಸ್ಟೋರ್‌ನಲ್ಲಿ ಲಭ್ಯವಿರುವ PMAY(U) ಆಪ್ಲಿಕೇಶನ್‍ನಲ್ಲಿ ಸೆಪ್ಟೆಂಬರ್ 10ರೊಳಗೆ ಅಪ್ಲೋಡ್ ಮಾಡಬಹುದು.

ಕೇಂದ್ರ ಸರ್ಕಾರವು ಸ್ಪರ್ಧೆಯ ಫಲಿತಾಂಶವನ್ನು ಸೆಪ್ಟೆಂಬರ್ 30 ರಂದು ಘೋಷಿಸಲಿದೆ. ವಿಜೇತರಿಗೆ (ಎಲ್ಲಾ ರಾಜ್ಯಗಳು ಸೇರಿ 25 ಜನರಿಗೆ) ಪ್ರಥಮ ಬಹುಮಾನ ₹25,000, ದ್ವಿತೀಯ ಬಹುಮಾನ ₹20,000, ಹಾಗೂ ತೃತೀಯ ಬಹುಮಾನ ₹12,500 ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಜಿಲ್ಲಾ ನಗರಾಭಿವೃದ್ಧಿ ಕೋಶ ಕಚೇರಿಯ ಸಿಎಲ್‌ಟಿಸಿ ತಜ್ಞರು ಅಥವಾ ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.