ADVERTISEMENT

ಮಿನಿ ಟ್ರಯಥ್ಲಾನ್‌: ಕೃಷಾಲ್‌, ವೈಷ್ಣವಿಗೆ ಪ್ರಶಸ್ತಿ

ಅಬ್ದುಲ್ ಹಕೀಂ, ವಿನಯ ಶೆಟ್ಟಿ, ಶಿಖಾ, ಗ್ರೀಷ್ಮಾ

​ಪ್ರಜಾವಾಣಿ ವಾರ್ತೆ
Published 17 ಜೂನ್ 2024, 5:45 IST
Last Updated 17 ಜೂನ್ 2024, 5:45 IST
ಕೃಷಾಲ್ ನಂಕಣಿ
ಕೃಷಾಲ್ ನಂಕಣಿ   

ಮಂಗಳೂರು: ನಗರದ ಕೃಷಾಲ್ ನಂಕಣಿ ಮತ್ತು ವೈಷ್ಣವಿ ಜಿ ಕುಡ್ವ ಅವರು ರಾಜ್ಯ ದೈಹಿಕರ ಸಂಘ ಮತ್ತು ಜೈ ಹಿಂದ್ ಈಜು ಕ್ಲಬ್ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಈಜು, ಸೈಕ್ಲಿಂಗ್ ಮತ್ತು ಓಟದ ಸ್ಪರ್ಧೆಯನ್ನು ಒಳಗೊಂಡ ಮಿನಿ ಟ್ರಯಥ್ಲಾನ್‌ನಲ್ಲಿ ಕ್ರಮವಾಗಿ ಪುರುಷರ ಮತ್ತು ಮುಹಿಳೆಯರ ಮುಕ್ತ ವಿಭಾಗದ ಪ್ರಶಸ್ತಿ ಮುಡಿಗೇರಿಸಿಕೊಂಡರು.

200 ಮೀಟರ್ಸ್ ಈಜು, 5 ಕಿಮೀ ಸೈಕ್ಲಿಂಗ್ ಮತ್ತು 800 ಮೀಟರ್ಸ್ ಓಟವನ್ನು ಒಳಗೊಂಡಿದ್ದ ಪುರುಷರ ವಿಭಾಗದ ಸ್ಪರ್ಧೆಯನ್ನು ಕೃಷಾಲ್‌ 26 ನಿಮಿಷ, 9.88 ಸೆಕೆಂಡುಗಳಲ್ಲಿ ಮುಕ್ತಾಯಗೊಳಿಸಿದರು. ಅವರು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಿಎಒ ಮುಖೇಶ್ ನಂಕಣಿ ಅವರ ಪುತ್ರ. ಮಹಿಳೆಯರ ಮುಕ್ತ ವಿಭಾಗದಲ್ಲಿ ವೈಷ್ಣವಿ ಜಿ ಕುಡ್ವ 30ನಿಮಿಷ, 2.49 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು.

ಪುರುಷರ ವಿಭಾಗದಲ್ಲಿ ಮೊಹಮದ್ ಅಬ್ದುಲ್ ಬಾಶಿತ್ ಮತ್ತು ಶಮಂತ್ ಜಿ.ಭಟ್ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದರು. ಮಹಿಳೆಯರ ವಿಭಾಗದ ದ್ವಿತೀಯ ಸ್ಥಾನ ಜಿಜ್ಞಾ ಪನ್ನಾನಿ ಅವರ ಪಾಲಾಯಿತು. 

ADVERTISEMENT

17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ವಫಿ ಅಬ್ದುಲ್ ಹಕೀಂ 24 ನಿಮಿಷ 22. 81 ಸೆಕೆಂಡುಗಳ ಸಾಧನೆಯೊಂದಿಗೆ ಪ್ರಥಮ ಸ್ಥಾನ ಗಳಿಸಿದರೆ ನಿಷಾಲ್ ಎಂ.ಪೂಜಾರಿ ದ್ವಿತೀಯ, ಸಾಕೇತ್‌ ವಿನಯ್‌ ಶೆಟ್ಟಿ ತೃತೀಯ ಸ್ಥಾನ ಗಳಿಸಿದರು. 14 ವರ್ಷದೊಳಗಿನ ಬಾಲಕರ ವಿಭಾಗದ ಮೊದಲ ಸ್ಥಾನ
ಆರುಷ್ ಅಶ್ವಿನ್ ಶೆಟ್ಟಿಗೆ (33 ನಿ, 49.43ಸೆ) ಲಭಿಸಿತು. ಪ್ರಹ್ಲಾದ್ ನಾಯಕ್ ದ್ವಿತೀಯ, ಪರಾಷ್ ದೇಬನಾಥ್ ತೃತೀಯರಾದರು.

17 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಶಿಕಾ ಆರ್.ಶೆಟ್ಟಿ ಪ್ರಥಮ (42ನಿ 30.48ಸೆ) ಪ್ರಶಸ್ತಿ ಗೆದ್ದುಕೊಂಡರು. 14 ವರ್ಷದೊಳಗಿನ ಬಾಲಕಿಯರ ಪ್ರಶಸ್ತಿ ಗ್ರೀಷ್ಮಾ ಶೆಟ್ಟಿ (28ನಿ 23.63ಸೆ) ಅವರ ಮುಡಿಯೇರಿತು. ಶ್ರೀನಿಧಿ ದ್ವಿತೀಯ, ಆರಾಧ್ಯಾ ಆಚಾರ್ ತೃತೀಯರಾದರು.

ಸಮಾರೋಪ ಸಮಾರಂಭ: ಮಂಗಳಾ ಕ್ರೀಡಾಂಗಣದಲ್ಲಿ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮುಡಾದ ಮಾಜಿ ಅಧ್ಯಕ್ಷ ತೇಜೋಮಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಪ್ರದೀಪ್ ಡಿಸೋಜ, ದಕ್ಷಿಣ ಕನ್ನಡ ಜಿಲ್ಲಾ ಈಜು ಸಂಸ್ಥೆಯ ಅಧ್ಯಕ್ಷ ಯತೀಶ್ ಬೈಕಂಪಾಡಿ, ರಾಜ್ಯ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷೆ ಲಿಲ್ಲಿ ಪಾಯಸ್, ಕ್ರೀಡಾ ಪ್ರೋತ್ಸಾಹಕ ವಿವೇಕ್ ಪೂಜಾರಿ, ಜೈ ಹಿಂದ್ ಈಜು ಕ್ಲಬ್‌ನ ತರಬೇತುದಾರ ರಾಮಕೃಷ್ಣ ರಾವ್ ಇದ್ದರು. ದೀಕ್ಷಿತಾ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.

26 ನಿಮಿಷ, 9.88 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಮೊದಲಿಗರಾದ ಕೃಷಾಲ್‌ ಮೂರು ಸ್ಪರ್ಧೆಗಳನ್ನು ಮುಗಿಸಲು 30ನಿ, 2.49 ಸೆಕೆಂಡು ತೆಗೆದುಕೊಂಡ ವೈಷ್ಣವಿ ಪುರುಷರ ವಿಭಾಗದಲ್ಲಿ ಮೊಹಮದ್ ಬಾಶಿತ್, ಮಹಿಳೆಯರ ವಿಭಾಗದಲ್ಲಿ ಜಿಜ್ಞಾ ದ್ವಿತೀಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.