ADVERTISEMENT

ಕುಕ್ಕೆ: ವಿದ್ಯಾರ್ಥಿಗಳಿಗೆ ಟೇಕ್ವಾಂಡೊ ತರಬೇತಿ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2024, 12:25 IST
Last Updated 4 ಸೆಪ್ಟೆಂಬರ್ 2024, 12:25 IST
ರೇಬತ್ ಕಟುವಾಲ್ ಛೇತ್ರಿ ಅವರು ಟೇಕ್ವಾಂಡೊ ಪ್ರಾತ್ಯಕ್ಷಿಕೆ ನೀಡಿದರು
ರೇಬತ್ ಕಟುವಾಲ್ ಛೇತ್ರಿ ಅವರು ಟೇಕ್ವಾಂಡೊ ಪ್ರಾತ್ಯಕ್ಷಿಕೆ ನೀಡಿದರು   

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಆಡಳಿತದ ಎಸ್‌ಎಸ್‌ಪಿಯು ಕಾಲೇಜಿನ ವಿದ್ಯಾರ್ಥಿನಿಯರಿಗಾಗಿ ಟೇಕ್ವಾಂಡೊ ತರಬೇತಿ ಕಾರ್ಯಾಗಾರ ಈಚೆಗೆ ನಡೆಯಿತು.

ರೇಬತ್ ಕಟುವಾಲ್ ಅವರು ಟೇಕ್ವಾಂಡೊದ ಪಟ್ಟುಗಳನ್ನು ಹೇಳಿಕೊಟ್ಟರು. ಪ್ರಾತ್ಯಕ್ಷಿಕೆಯನ್ನೂ ನೀಡಿದರು. ಚಾಣಸ್ಯ ಕಟುವಾಲ್ ಆಕಸ್ಮಿಕವಾಗಿ ಎದುರಾಗುವ ಕಠಿಣ ಪರಿಸ್ಥಿತಿ ಎದುರಿಸಲು ಈ ಕಲೆ ನೆರವಾಗುತ್ತದೆ ಎಂದು ಅವರು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಸೋಮಶೇಖರ ನಾಯಕ್ ಮಾತನಾಡಿ ಈ ಸಮರ ಕಲೆ ಅಭ್ಯಸಿಸಲು ಕಾಲೇಜಿನಲ್ಲಿ ತರಬೇತಿ ಆಯೋಜಿಸಲಾಗುವುದು ಎಂದು ತಿಳಿಸಿದರು. ಆಯ್ಕೆ ಶ್ರೇಣಿ ಉಪನ್ಯಾಸಕಿಯರಾದ ರೇಖಾರಾಣಿ ಸೋಮಶೇಖರ್, ಜಯಶ್ರೀ ವಿ.ದಂಬೆಕೋಡಿ, ಜ್ಯೋತಿ.ಪಿ.ರೈ, ಸವಿತಾ ಕೈಲಾಸ್, ಭವ್ಯಶ್ರೀ ಹರೀಶ್ ಕುಲ್ಕುಂದ, ಸೌಮ್ಯಾಕೀರ್ತಿ, ಸುಧಾ, ಮಾನಸ, ರತ್ನಾಕರ ಸುಬ್ರಹ್ಮಣ್ಯ ಹಾಗೂ ಮಹೇಶ್ ಕೆ.ಎಚ್ ಇದ್ದರು. ಶ್ರುತಿ ನಿರೂಪಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.