ADVERTISEMENT

ಸುಬ್ರಹ್ಮಣ್ಯ | ಕುಮಾರ ಪರ್ವತ ಚಾರಣ: ಆನ್‌ಲೈನ್‌ ಬುಕ್ಕಿಂಗ್‌, ಸಂಖ್ಯೆ ಮಿತಿ

​ಪ್ರಜಾವಾಣಿ ವಾರ್ತೆ
Published 30 ಜನವರಿ 2024, 15:47 IST
Last Updated 30 ಜನವರಿ 2024, 15:47 IST
<div class="paragraphs"><p>ಕುಮಾರ ಪರ್ವತ </p></div>

ಕುಮಾರ ಪರ್ವತ

   

ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ಕುಮಾರ ಪರ್ವತ ಚಾರಣಕ್ಕೆ ಫೆ.1ರಿಂದ ನಿರ್ಬಂಧ ಹೇರಲಾಗಿದೆ. ಅಕ್ಟೋಬರ್ ಅಥವಾ ಮುಂದಿನ ಆದೇಶದ ಬಳಿಕ ಚಾರಣಕ್ಕೆ ಆನ್‌ಲೈನ್ ಮೂಲಕವೇ ಕಾದಿರಿಸುವ ಯೋಜನೆ ರೂಪಿಸಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದ್ದು, ಈ ಬಗ್ಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ ಸರಣಿ ರಜೆ ಕಾರಣದಿಂದ ಕುಮಾರ ಪರ್ವತ ಚಾರಣಕ್ಕೆ ಹೆಚ್ಚಿನ ಸಂಖ್ಯೆಯ ಚಾರಣಿಗರು ಬಂದಿದ್ದರು. ಚಾರಣಿಗರ ನಿಯಂತ್ರಣ ಹಾಗೂ ತಪಾಸಣೆ ಅರಣ್ಯ ಇಲಾಖೆ ಸಿಬ್ಬಂದಿಗೆ ತೊಡಕಾಗಿದ್ದ ಬಗ್ಗೆ ಹಾಗೂ ಪರಿಸರಕ್ಕೂ ಹಾನಿಯಾಗುವ ಆತಂಕವನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ವ್ಯಕ್ತಪಡಿಸಿದ್ದರು.

ADVERTISEMENT

ರಾಜ್ಯದ ಎಲ್ಲ ಚಾರಣ ತಾಣಗಳಲ್ಲೂ ಆನ್‌ಲೈನ್ ಬುಕ್ಕಿಂಗ್‌ ವ್ಯವಸ್ಥೆ ಜಾರಿಗೊಳಿಸಬೇಕು ಮತ್ತು ನಿರ್ದಿಷ್ಟ ಸಂಖ್ಯೆಗೆ ಸೀಮಿತಗೊಳಿಸಬೇಕು. ಪ್ರಮಾಣಿತ ಕಾರ್ಯ ವಿಧಾನ (ಎಸ್‌ಒಪಿ) ರೂಪಿಸುವವರೆಗೆ, ಆನ್‌ಲೈನ್ ಬುಕ್ಕಿಂಗ್ ಇಲ್ಲದ ತಾಣಗಳಲ್ಲಿ ಚಾರಣವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಬೇಕು ಎಂದು ಸಚಿವರು ಸೂಚಿಸಿದ್ದರು.

ಕುಮಾರ ಪರ್ವತ ಚಾರಣಕ್ಕೆ ದಿನಕ್ಕೆ 300 ಅಥವಾ 350 ಚಾರಣಿಗರಿಗೆ ಮಾತ್ರ ಅವಕಾಶ ನೀಡುವುದು, ಸಂಪೂರ್ಣ ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.