ಬದಿಯಡ್ಕ: ಕಾರಡ್ಕ ಹಾಗೂ ಮುಳಿಯಾರು ಗ್ರಾಮ ಪಂಚಾಯಿತಿ ವಿವಿಧೆಡೆ ಚಿರತೆ ಓಡಾಡಿರುವ ಕುರುಹು ಕಂಡು ಬಂದಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಕಾನತ್ತೂರು ಮೂಡಾಯಿಂ ಮನೆಯ ರಾಜೀವನ್ ಅವರ ಮನೆಯ ನಾಯಿ, ಜಾನುವಾರುಗಳು ನಾಪತ್ತೆಯಾಗಿದ್ದು, ಚಿರತೆ ತಿಂದಿರಬಹುದೆಂದು ಶಂಕಿಸಲಾಗಿದೆ. ಬೀಟಿಯಡ್ಕ, ನಯ್ಯಂಗಯ, ಕೊಟ್ಟಂಗುಳಿ, ಪಾಣೂರು ಪ್ರದೇಶಗಳಲ್ಲಿ ಕಾಡುಪ್ರಾಣಿಗಳ ಉಪಟಳ ಹೆಚ್ಚಾಗಿದೆ. ಈ ಪ್ರದೇಶದಲ್ಲಿ ಚಿರತೆ ಓಡಾಡಿರುವ ದೃಶ್ಯ ಅರಣ್ಯ ಇಲಾಖೆ ಇರಿಸಿರುವ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎನ್ನಲಾಗುತ್ತಿದೆ. ಇದೀಗ ಈ ಪ್ರದೇಶದ ನಿವಾಸಿಗಳು ಮಕ್ಕಳನ್ನು ಶಾಲೆಗೆ ಕಳುಹಿಸಲು, ರಾತ್ರಿ ಹೊತ್ತಿನಲ್ಲಿ ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.