ಉಜಿರೆ: ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ, ಹೇಮಾವತಿ ವೀ.ಹೆಗ್ಗಡೆ ಅವರು ಯಕ್ಷಗಾನ ಮತಗಟ್ಟೆ ಎಸ್‌ಡಿಎಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ಮಾಡಿದರು.
‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳಾಗಿದ್ದು, ಅರ್ಹ ಹಾಗೂ ದಕ್ಷ ನಾಯಕರನ್ನು ಆಯ್ಕೆ ಮಾಡುವುದು ಪ್ರಜೆಗಳ ಹಕ್ಕು ಮತ್ತು ಕರ್ತವ್ಯವೂ ಆಗಿದೆ. ಮತದಾನದ ಮೂಲಕ ಆದರ್ಶ ನಾಯಕರು ಆಯ್ಕೆಯಾಗಲಿ’ ಎಂದರು.
ಡಿ.ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಅವರೂ ಅದೇ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು.
ಮುಂಡಾಜೆಯಲ್ಲಿ ಮತಗಟ್ಟೆ 78ರಲ್ಲಿ ಮತಯಂತ್ರ ಹಾಳಾದುದರಿಂದ ಕೊಂಚ ವಿಳಂಬವಾಗಿ ಮತದಾನ ಆರಂಭಗೊಂಡಿತು.
ಶಾಸಕ ಹರೀಶ್ ಪೂಂಜ ಅವರು ಪತ್ನಿಯೊಂದಿಗೆ ಗರ್ಡಾಡಿ ಶಾಲೆಯಲ್ಲಿ ಮತದಾನ ಮಾಡಿದರು.
ಧರ್ಮಸ್ಥಳದ ದೇವಸ್ಥಾನ ಮತ್ತು ಖಾಸಗಿ ಕಲ್ಯಾಣಮಂಟಪಗಳಲ್ಲಿ ಹಲವು ವಿವಾಹಗಳು ನಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.