ಪುತ್ತೂರು: ‘ಲವ್ ಜಿಹಾದ್ – ನೀವು ಇದಕ್ಕೆ ಬಲಿಯಾಗಬೇಡಿ’ ಎಂದು ಡಾ.ಎಂ.ಕೆ.ಪ್ರಸಾದ್ ಅವರ ಹೆಸರಿನಲ್ಲಿ ಅಳವಡಿಸಿರುವ ಕಟೌಟ್ ಪುತ್ತೂರಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯ ಅರಣ್ಯ ಇಲಾಖೆಯ ಕಚೇರಿಯ ಎದುರು ಹಾಕಲಾಗಿದೆ.
‘ಹಿಂದೂ ಹುಡುಗಿ ಶ್ರದ್ಧಾಳ ಹತ್ಯೆ. ದೇಹವನ್ನು 35 ತುಂಡು ಮಾಡಿದರು. ಕಾರಣ ಲವ್ ಜಿಹಾದ್. ಇದಕ್ಕೆ ನೀವು ಬಲಿಯಾಗಬೇಡಿ’ ಎಚ್ಚರಿಸುವ ಕಟೌಟ್ ಅನ್ನು ವೈದ್ಯ, ಹಿಂದುತ್ವ ಪರ ಸಂಘಟನೆಗಳಲ್ಲಿ ಸಕ್ರಿಯರಾಗಿರುವ ಡಾ.ಎಂ.ಕೆ. ಪ್ರಸಾದ್ ಅವರ ಹೆಸರಿನಲ್ಲಿ ಅಳವಡಿಸಲಾಗಿದೆ.
‘ನಾನು ಯಾವುದೇ ಧರ್ಮ ಅಥವಾ ಸಮುದಾಯದ ವಿರುದ್ಧ ಅಲ್ಲ. ಆದರೆ, ನಮ್ಮ ಸುತ್ತಮುತ್ತಲ ಬೆಳವಣಿಗೆ ಬಗ್ಗೆ ಹದಿಹರೆಯದವರಿಗೆ ಅರಿವು ಇರಬೇಕು. ಬಣ್ಣದ ಆಮಿಷಗಳನ್ನು ಒಡ್ಡಿ ಏನೇನು ಮಾಡುತ್ತಾರೆ ಎಂಬುದೂ ಗೊತ್ತಿರಬೇಕು. ಅದಕ್ಕಾಗಿ ನಾನೇ ಈ ಫಲಕ ಹಾಕಿಸಿದ್ದೇನೆ. ಸ್ಥಳೀಯ ಎಲ್ಲ ಕಾಲೇಜುಗಳಿಗೂ ಭಿತ್ತಿಪತ್ರಗಳನ್ನು ಕಳುಹಿಸಿದ್ದೇನೆ. ಯಾವುದೇ ಸಂಘಟನೆ ಅಥವಾ ಸಂಘ–ಸಂಸ್ಥೆ ಪರವಾಗಿ ಮಾಡಿಲ್ಲ. ವೈಯಕ್ತಿಕ ಹೆಸರಿನಲ್ಲಿಯೇ ಕಳುಹಿಸಿದ್ದೇನೆ’ ಎಂದು ಡಾ.ಎಂ.ಕೆ. ಪ್ರಸಾದ್ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.