ADVERTISEMENT

ಮಂಗಳೂರು | ನಿಷೇಧಿತ ಎಲ್‌ಎಸ್‌ಡಿ ವಶ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2024, 5:45 IST
Last Updated 6 ಅಕ್ಟೋಬರ್ 2024, 5:45 IST
ಆದಿಲ್‌
ಆದಿಲ್‌   

ಮಂಗಳೂರು: ನಿಷೇಧಿತ ಮಾದಕ ಪದಾರ್ಥ ಲೈಸರ್ಜಿಕ್‌ ಆ್ಯಸಿಡ್‌ ಡೈಯೀಥೈಲಮೈಡ್‌ (ಎಲ್‌ಎಸ್‌ಡಿ) ಮಾರಾಟದಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಮೂಲ್ಕಿ ಠಾಣೆಯ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಆರೋಪಿಗಳಿಂದ ಒಟ್ಟು 26 ಎಲ್‌ಎಸ್‌ಡಿ ಸ್ಟಾರ್ ಸ್ಟ್ರಿಪ್ಸ್‌, ಕೃತ್ಯಕ್ಕೆ ಬಳಸಿದ ಕಾರು ಹಾಗೂ 2 ಆ್ಯಪಲ್ ಐ ಫೋನ್ ವಶಪಡಿಸಿಕೊಂಡಿದ್ದಾರೆ.

‘ಕೇರಳದ ಆದಿಲ್ ಹಾಗೂ ಮಹಮ್ಮದ್ ನಿಹಾಲ್ ಎಂ.ಪಿ ಬಂಧಿತ ಆರೋಪಿಗಳು. ಅವರು ನಗರದ ಹೊರವಲಯದ ಕಾಲೇಜೊಂದರ ವಿದ್ಯಾರ್ಥಿಗಳು. ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಕಾರಿನಲ್ಲಿ ನಿಷೇಧಿತ ಮಾದಕ ಪದಾರ್ಥ ಇಟ್ಟುಕೊಂಡು ಹಳೆಯಂಗಡಿ ಗ್ರಾಮದ ಕೊಪ್ಪಳ ಸೇತುವೆ ಬಳಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಮೂಲ್ಕಿ ಠಾಣೆಯ ಪಿಎಸ್ಐ  ಅನಿತಾ ಎಚ್.ಬಿ ಅವರಿಗೆ ಮಾಹಿತಿ ಬಂದಿತ್ತು.  ಸಿಬ್ಬಂದಿ ಜೊತೆ ಅನಿತಾ ಸ್ಥಳಕ್ಕೆ ಧಾವಿಸಿ, ಪರಿಶೀಲಿಸಿದಾಗ  ಆರೋಪಿಗಳ ಬಳಿ ಎಲ್‌ಎಸ್‌ಡಿ ಪತ್ತೆಯಾಗಿತ್ತು. ಅದರ ಮೌಲ್ಯ ₹ 78 ಸಾವಿರ ಎಂದು ಅಂದಾಜಿಸಲಾಗಿದೆ.’ ಎಂದು ಮಾಹಿತಿ ನೀಡಿದರು.  

ADVERTISEMENT

ನಗರ ಉತ್ತರ ವಿಭಾಗದ ಎ.ಸಿ.ಪಿ. ಶ್ರೀಕಾಂತ್ ಕೆ. ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಗೆ  ಮೂಲ್ಕಿ ಠಾಣೆಯ ಎ.ಎಸ್.ಐ ಉಮೇಶ್, ಹೆಡ್ ಕಾನ್ಸ್ಟೆಬಲ್‌ ಚಂದ್ರಶೇಖರ್, ಯೋಗೀಶ್, ಕಾನ್‌ಸ್ಟೆಬಲ್‌ಗಳಾದ ವಿನಾಯಕ, ಸುನಿಲ್ ಟಿ. ಪಡನಡ, ಶಂಕರ ಜಡೇದರ್, ಬಸವರಾಜ್, ಸಂದೀಪ್ ಮತ್ತು ಮೊಹಮ್ಮದ್ ಶಾದಾಬ್  ಹಾಗೂ ಮಂಗಳೂರು ನಗರ ಉತ್ತರ ಉಪ ವಿಭಾಗದ ಮಾದಕ ದ್ರವ್ಯ ಜಾಲ ನಿಗ್ರಹದಳದ ‌ಅಧಿಕಾರಿಗಳು ಮತ್ತು ಸಿಬ್ಬಂದಿ ಸಹಕರಿಸಿದ್ದರು.

ನಿಹಾಲ್‌
ಎಲ್‌ಎಸ್‌ಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.