ADVERTISEMENT

ಮಂಗಳೂರು | ಜೆರೋಸಾ ಶಾಲೆಯ ವಿವಾದ: ಡಿಡಿಪಿಐ ಡಿ.ಆರ್‌.ನಾಯ್ಕ್‌ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2024, 14:58 IST
Last Updated 14 ಫೆಬ್ರುವರಿ 2024, 14:58 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಮಂಗಳೂರು: ನಗರದ ಸೇಂಟ್‌ ಜೆರೋಸಾ ಶಾಲೆ ವಿವಾದದ ನಡುವೆಯೇ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಡಿಡಿಪಿಐ) ದಯಾನಂದ ರಾಮಚಂದ್ರ ನಾಯ್ಕ (ಡಿ.ಆರ್‌.ನಾಯ್ಕ) ಅವರನ್ನು ಬೆಳಗಾವಿಯ ಸರ್ಕಾರಿ ಶಿಕ್ಷಕರ ಶಿಕ್ಷಣ ಕಾಲೇಜಿನ ಪ್ರವಾಚಕರಾಗಿ ವರ್ಗಾವಣೆ ಮಾಡಲಾಗಿದೆ.

ಈ ಹುದ್ದೆಗೆ ಕಲಬುರಗಿಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತರ ಕಚೇರಿಯ ಯೋಜನೆ ವಿಭಾಗದಲ್ಲಿ ಉಪನಿರ್ದೇಶಕರಾಗಿದ್ದ ವೆಂಕಟೇಶ ಸುಬ್ರಾಯ ಪಟಗಾರ ಅವರನ್ನು ವರ್ಗಾಯಿಸಲಾಗಿದೆ.

ADVERTISEMENT

ಜೆರೋಸಾ ಶಾಲೆಯ ವಿವಾದ ಭುಗಿಲೆದ್ದಾಗ ಡಿಡಿಪಿಐ ಡಿ.ಆರ್‌.ನಾಯ್ಕ ಸರಿಯಾಗಿ ನಿರ್ವಹಿಸಿಲ್ಲ ಎಂದು ಕಾಂಗ್ರೆಸ್‌ ನಾಯಕರು ಆಕ್ಷೇಪಿಸಿದ್ದರು. ಕೆಪಿಸಿಸಿ ಉಪಾಧ್ಯಕ್ಷ ರಮಾನಾಥ ರೈ, ಐವನ್ ಡಿಸೋಜ, ಜೆ.ಆರ್‌. ಲೋಬೊ ಕೂಡ ಡಿಡಿಪಿಐ ವರ್ತನೆಯನ್ನು ಖಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.