ಮಂಗಳೂರು: ದೇಶದ್ರೋಹ, ಭಯೋತ್ಪಾದನೆ ಹಾಗೂ ಇಂತಹ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವವರ ಪರವಾಗಿ ವಕಾಲತ್ತು ನಡೆಸದೇ ಇರುವಂತೆ ಮನವಿ ಮಾಡಲು ಮಂಗಳೂರು ವಕೀಲರ ಸಂಘದ ಕಾರ್ಯಕಾರಿಣಿಯು ನಿರ್ಣಯ ಅಂಗೀಕರಿಸಿದೆ.
ಮಂಗಳೂರಿನ ಕದ್ರಿ ಕೆಳಗಿನ ರಸ್ತೆ ಹಾಗೂ ನ್ಯಾಯಾಲಯ ಆವರಣದಲ್ಲಿ ವಿವಾದಾತ್ಮಕ ಗೋಡೆಬರಹ ಕಂಡು ಬಂದ ಹಿನ್ನೆಲೆಯಲ್ಲಿ ವಕೀಲರ ಸಂಘವು ಈ ನಿರ್ಣಯಕ್ಕೆ ಬಂದಿದೆ.
ಸಂಘದ ಅಧ್ಯಕ್ಷ ಎಂ. ನರಸಿಂಹ ಹೆಗಡೆ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಕಾರ್ಯಕಾರಿಣಿಯಲ್ಲಿ, ‘ಎಲ್ಲ ವಕೀಲರಿಗೂ ಮನವಿ ಮಾಡುವ’ ಸರ್ವಸಮ್ಮತದ ನಿರ್ಣಯ ಕೈಗೊಳ್ಳಲಾಗಿದೆ.
‘ಮಂಗಳೂರಿನಲ್ಲಿ ವಿವಾದಾತ್ಮಕ ಗೋಡೆಬರಹ ಕಂಡುಬಂದಿದೆ. ಅದರಲ್ಲೂ, ನಮ್ಮ ನ್ಯಾಯಾಲಯದ ಸಂಕೀರ್ಣ ಒಳಗಿನ ಸ್ಥಳವನ್ನೇ ದುಷ್ಕರ್ಮಿಗಳು ಬಳಸಿದ್ದಾರೆ. ಇಂತಹ ಕೃತ್ಯಗಳನ್ನು ಕಟುವಾಗಿ ಖಂಡಿಸಿದ್ದು, ಈ ನಿರ್ಣಯ ಕೈಗೊಂಡಿದ್ದೇವೆ’ ಎಂದು ಸಂಘದ ಅಧ್ಯಕ್ಷ ಎಂ.ನರಸಿಂಹ ಹೆಗಡೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.
‘ತಮ್ಮ ಪರವಾಗಿ ವಕಾಲತ್ತು ನಡೆಸುವ ಹಕ್ಕು ಯಾವುದೇ ಕಕ್ಷಿದಾರರಿಗೆ ಇದೆ. ಆದರೆ, ಇದು ದೇಶದ್ರೋಹದ ಪ್ರಕರಣವಾಗಿದ್ದು, ನಾವು ವಕೀಲರು ಸೇರಿಕೊಂಡು ಎಲ್ಲ ವಕೀಲರ ಸಮೂಹದಲ್ಲಿ ಮನವಿ ಮಾಡಿಕೊಂಡಿದ್ದೇವೆ’ ಎಂದು ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.