ಮುಡಿಪು: ಬದುಕಿನಲ್ಲಿ ಆತಂಕ, ಸವಾಲು ಸಹಜ. ಆದರೆ, ಅದನ್ನೇ ಮುಂದು ಮಾಡಿ ಭರವಸೆ ಕಳೆದುಕೊಳ್ಳದಿರಿ. ಮಾನವತೆಯ ಕಡೆಗೆ ಹೆಜ್ಜೆಹಾಕುವ ಪ್ರಯತ್ನವನ್ನು ಮುಂದುವರಿಸಿ ಎಂದು ಕಾರ್ಕಳ ಭುವನೇಂದ್ರ ಕಾಲೇಜಿನ ಕನ್ನಡ ಉಪನ್ಯಾಸಕಿ ಸುಲೋಚನಾ ಪಚ್ಚಿನಡ್ಕ ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ನಡೆದ ‘ಬಿತ್ತಿ’ ದಿನಾಚರಣೆಯಲ್ಲಿ ಬರವಣಿಗೆಯ ಮಹತ್ವದ ಕುರಿತು ಉಪನ್ಯಾಸ ನೀಡಿದರು.
ಕನ್ನಡ ಭಾಷೆ ನಮ್ಮ ಭಾವದ ಭಾಷೆ. ಕನ್ನಡಿಗರಾಗಿರುವುದಕ್ಕೆ ನಾವು ಹೆಮ್ಮೆ ಪಡಬೇಕು. ಸಾಹಿತ್ಯದ ಓದು ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರೊ.ಸೋಮಣ್ಣ ಮಾತನಾಡಿ, ಕನ್ನಡ ವಿಭಾಗದ ಬಿತ್ತಿ ಪತ್ರಿಕೆಗೆ 33 ವರ್ಷಗಳ ಇತಿಹಾಸವಿದೆ. ಅನೇಕ ಕನ್ನಡದ ಬರಹಗಾರರನ್ನು ರೂಪಿಸಿದ ಹೆಗ್ಗಳಿಕೆ ಇದಕ್ಕಿದೆ. ಓದು ಮತ್ತು ಬರವಣಿಗೆ ಮನುಷ್ಯನ ಆಲೋಚನೆಯನ್ನು ಉತ್ತಮಗೊಳಿಸುತ್ತದೆ ಎಂದರು.
ಕನ್ನಡ ವಿಭಾಗದ ಪ್ರಾಧ್ಯಾಪಕರಾದ ನಾಗಪ್ಪ ಗೌಡ, ಧನಂಜಯ ಕುಂಬ್ಳೆ, ಯಶುಕುಮಾರ್, ಬಿತ್ತಿ ಸಂಪಾದಕಿ ಸಂಧ್ಯಾ ಎನ್. ಭಾಗವಹಿಸಿದ್ದರು. ಕನ್ನಡ ಎಂ.ಎ ವಿದ್ಯಾರ್ಥಿಗಳಾದ ಶಂಕರಿ, ರೇಷ್ಮಾ ಎಂ.ಬಾರಿಗ, ಸಲೀಂ ಸುಳ್ಯ ಕವಿತೆ ವಾಚಿಸಿದರು.
ಪೂಜಾ ವಂದಿಸಿದರು. ಉಪಸಂಪಾದಕಿ ಪ್ರತೀಕ್ಷಾ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.