ಮಂಗಳೂರು: ಇಲ್ಲಿನ ಬಜಪೆಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೊ ಕಂಪನಿಯ ಸಹಯೋಗದೊಂದಿಗೆ ‘3-ಪಾಯಿಂಟ್ ಇಳಿಯುವ’ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ.
ಈ ಹೊಸ ವ್ಯವಸ್ಥೆಯಲ್ಲಿ ಪ್ರಯಾಣಿಕರು ಮೂರು ರ‍್ಯಾಂಪ್‌ಗಳ ಬದಲಿಗೆ ಎರಡು ರ‍್ಯಾಂಪ್‌ಗಳನ್ನು ಮತ್ತು ವಿಮಾನ ಹತ್ತುವ ಸೇತುವೆಯನ್ನು (ಏರೊ ಬ್ರಿಡ್ಜ್) ಮಾತ್ರ ಬಳಸಬಹುದಾಗಿದೆ. ಇಂಡಿಗೊ ಸಂಸ್ಥೆಯು ಈ ಹಿಂದೆ ಮುಂಭಾಗದಲ್ಲಿ ಎರಡು ಮತ್ತು ಹಿಂಭಾಗದಲ್ಲಿ ಒಂದು ರ‍್ಯಾಂಪ್ ಅನ್ನು ಬಳಸುತ್ತಿತ್ತು. ಸಂಸ್ಥೆಯು ತನ್ನ 16ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಈ ನೂತನ ವ್ಯವಸ್ಥೆಯನ್ನು ಪರಿಚಯಿಸಿತ್ತು.
ಇಂಡಿಗೋ ಸಂಸ್ಥೆಯು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2023ರ ಜೂನ್ 14 ರಂದು 3ಪಾಯಿಂಟ್ ಇಳಿಯುವ ವ್ಯವಸ್ಥೆಯನ್ನು ಮೊದಲ ಬಾರಿ ಯಶಸ್ವಿಯಾಗಿ ಬಳಸಿತ್ತು. ಆದರೆ ಆಗ ಸಂಸ್ಥೆಯು ಮೂರು ರ‍್ಯಾಂಪ್‌ಗಳನ್ನು ಬಳಸಿತ್ತು. ಡಿ. 6 ರಂದು ಬೆಂಗಳೂರಿನಿಂದ 227 ಪ್ರಯಾಣಿಕರೊಂದಿಗೆ ಬಂದ ಇಂಡಿಗೊ ಸಂಸ್ಥೆಯ ವಿಮಾನವು ಪ್ರಯಾಣಿಕರ ಬೋರ್ಡಿಂಗ್ ಸೇತುವೆ 10ರಲ್ಲಿ ನಿಂತಿತ್ತು. ವಿಮಾನ ನಿಲ್ದಾಣದ ಕಾರ್ಯಾಚರಣೆ ತಂಡದ ಸಿಬ್ಬಂದಿ ಮುಂಭಾಗ ಮತ್ತು ಹಿಂಭಾಗದಲ್ಲಿಎರಡು ರ‍್ಯಾಂಪ್‌ಗಳನ್ನು ಜೋಡಿಸಿ ಪ್ರಯಾಣಿಕರು ತ್ವರಿತವಾಗಿ ವಿಮಾನದಿಂದ ಇಳಿಯಲು ಅನುವುಮಾಡಿಕೊಟ್ಟರು’ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.