ಬೆಳ್ತಂಗಡಿ: ಜೆಇಇ ಮೇನ್ಸ್‌ನ ಮೊದಲ ಸ್ಲಾಟ್‌ನಲ್ಲಿ ಗುರುವಾಯನಕೆರೆ ಎಕ್ಸೆಲ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಕಾಲೇಜಿನ ವಿದ್ಯಾರ್ಥಿಗಳಾದ ಪ್ರಜ್ವಲ್ ಎಚ್. ಎಂ 99.8869 ಪರ್ಸಂಟೈಲ್, ನೌಮನ್ ಶೇಖ್ 98.6863, ಚಿನ್ಮಯ್ ವೈ.ಕೆ 98.3301, ಸಿಂಚನ್ 97.8593, ಮಹಾದೇವ ಸ್ವಾಮಿ 97.5002, ಶಾಶ್ವತ್ ಎಸ್. ಪಿ 96.69, ತನ್ವಿ ಆರ್.ಟಿ. 96.56, ಸಿದ್ಧಾರ್ಥ್ ಎಚ್.ಆರ್. 96.47, ರಿಷ್ವಿತ್ ಶೆಟ್ಟಿ 95.81, ಧ್ಯಾನ್ 95. 39 ಪರ್ಸಂಟೈಲ್ ಪಡೆದಿದ್ದಾರೆ. ಕಾಲೇಜಿನ 72 ವಿದ್ಯಾರ್ಥಿಗಳ ಪೈಕಿ 53 ವಿದ್ಯಾರ್ಥಿಗಳು ಶೇ 90 ಪರ್ಸಂಟೈಲ್‌ಗಿಂತ ಅಧಿಕ ಅಂಕ ಪಡೆದಿದ್ದಾರೆ.
ನೀಟ್, ಸಿಇಟಿ, ನ್ಯಾಷನಲ್ ಡಿಫೆನ್ಸ್ ಅಕಾಡೆಮಿ, ನಾಟಾ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕಾಲೇಜಿನಲ್ಲಿ ತರಬೇತಿ ನೀಡಲಾಗುತ್ತದೆ. ಎಕ್ಸೆಲ್‌ನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ಹೆಸರು ವಾಸಿಯಾದ ಎಐಐಎಂಎಸ್, ಐಐಟಿ, ಎನ್‌ಐಐಟಿ ಹಾಗೂ ಉತ್ತಮ ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟ್ ಪಡೆದಿದ್ದಾರೆ. ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಎಕ್ಸೆಲ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅಭಿನಂದಿಸಿದ್ದಾರೆ.
ಪ್ರಜ್ವಲ್ ಎಚ್. ಎಂ 2. ನೌಮನ್ ಶೇಕ್ 3. ಚಿನ್ಮಯ್ ವೈ.ಕೆ 4. ಸಿಂಚನ್ 5. ಮಹಾದೇವ ಸ್ವಾಮಿ 6. ಶಾಶ್ವತ್ ಎಸ್. ಪಿ 7. ತನ್ವಿ ಆರ್ ಟಿ 8. ಸಿದ್ಧಾರ್ಥ್ ಎಚ್ ಆರ್ 9. ರಿಷ್ವಿತ್ ಶೆಟ್ಟಿ 10. ಧ್ಯಾನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.