ಮಂಗಳೂರು: ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಯೊಬ್ಬರಿಗೆ ಎದೆನೋವು ಕಾಣಿಸಿಕೊಂಡಾಗ ತಕ್ಷಣ ಎಚ್ಚೆತ್ತ ಬಸ್‌ನ ಚಾಲಕ ಮತ್ತು ನಿರ್ವಾಹಕ ಪ್ರಯಾಣಿಕರಿದ್ದ ಬಸ್ ಅನ್ನು ಕೇವಲ ಆರು ನಿಮಿಷದಲ್ಲಿ ಆಸ್ಪತ್ರೆ ಬಾಗಿಲಿಗೆ ತೆಗೆದುಕೊಂಡು ಹೋಗಿ ವಿದ್ಯಾರ್ಥಿಯ ಪ್ರಾಣ ರಕ್ಷಣೆ ಮಾಡಿದ್ದಾರೆ.
13F ರೂಟ್ ನಂಬರ್ ಕೃಷ್ಣ ಪ್ರಸಾದ್ ಬಸ್ ಎಂದಿನಂತೆ ಕುಳೂರು ಮಾರ್ಗವಾಗಿ ಚಲಿಸುತಿತ್ತು. ಅದರಲ್ಲಿ ಪ್ರಯಾಣಿಸುತಿದ್ದ ಕಾಲೇಜು ವಿದ್ಯಾರ್ಥಿಯೊಬ್ಬರಿಗೆ ಎದೆ ನೋವು ಕಾಣಿಸಿಕೊಂಡಿತು. ಹೃದಯಾಘಾತದ ಸೂಚನೆ ಅರಿತ ಬಸ್ ಚಾಲಕ ನಿರ್ವಾಹಕರಾದ ಗಜೇಂದ್ರ ಕುಂದರ್ ಹಾಗೂ ಮಹೇಶ್ ಪೂಜಾರಿ ಪ್ರಯಾಣಿಕರಿದ್ದ ಬಸ್ ಅನ್ನು ಆಸ್ಪತ್ರೆ ಕಡೆಗೆ ಚಲಾಯಿಸಿದರು.
ಆಂಬುಲೆನ್ಸ್‌ನಂತೆ ಸೈರನ್ ಹಾಕಿಕೊಂಡು 6 ಕಿ.ಮೀ ದೂರವನ್ನು 6 ನಿಮಿಷಗಳಲ್ಲಿ ಕ್ರಮಿಸಿ ನಗರದ ಕಂಕನಾಡಿ ಆಸ್ಪತ್ರೆ ತಲುಪಿದರು. ಹೊರಾಂಗಣದಲ್ಲಿ ನಿಂತಿದ್ದ ಸೆಕ್ಯುರಿಟಿ ಅನುಮತಿಗೂ ಕಾಯದೆ ನೇರವಾಗಿ ತುರ್ತು ಚಿಕಿತ್ಸೆ ವಿಭಾಗದ ಕಡೆ ಚಲಾಯಿಸಿದರು. ತಕ್ಷಣ ಚಿಕಿತ್ಸೆ ದೊರೆತು ವಿದ್ಯಾರ್ಥಿಯ ಜೀವ ಉಳಿದಿದೆ. ಬಸ್ ಚಾಲಕ, ನಿರ್ವಾಹಕರ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.