ADVERTISEMENT

ಮಂಗಳೂರು ವಿವಿ: ‘ಅತ್ಯುತ್ತಮ ಇ– ಆಡಳಿತ’ದ ಗರಿ

ಕಾಗದರಹಿತ ಆಡಳಿತದಲ್ಲಿ ಶೇ 100ರ ಸಾಧನೆ

ಸಂಧ್ಯಾ ಹೆಗಡೆ
Published 7 ಮಾರ್ಚ್ 2024, 6:54 IST
Last Updated 7 ಮಾರ್ಚ್ 2024, 6:54 IST
<div class="paragraphs"><p>ಮಂಗಳೂರು ವಿವಿ</p></div>

ಮಂಗಳೂರು ವಿವಿ

   

ಮಂಗಳೂರು: ದೈನಂದಿನ ಕಚೇರಿ ಚಟುವಟಿಕೆಗಳಲ್ಲಿ ಕಾಗದರಹಿತ ವ್ಯವಸ್ಥೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವ ಮಂಗಳೂರು ವಿಶ್ವವಿದ್ಯಾನಿಲಯವು, ರಾಜ್ಯದ ಅತ್ಯುತ್ತುಮ ಇ– ಆಡಳಿತ ಜಾರಿಗೊಳಿಸಿರುವ ವಿಶ್ವವಿದ್ಯಾಲಯ ಎಂಬ ಪ್ರಶಂಸೆಗೆ ಪಾತ್ರವಾಗಿದೆ.

ಉನ್ನತ ಶಿಕ್ಷಣ ಇಲಾಖೆಯು ಆಡಳಿತ ವ್ಯವಸ್ಥೆ ಸುಧಾರಣೆ ನಿಟ್ಟಿನಲ್ಲಿ 10 ಅಂಶಗಳನ್ನು ಪರಿಗಣಿಸಿ, ವಿಶ್ವವಿದ್ಯಾಲಯಗಳ ಮೌಲ್ಯಮಾಪನ ಮಾಡಲು ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿತ್ತು. ಈ ಸಮಿತಿಯು ಪ್ರಾತ್ಯಕ್ಷಿಕೆ ಮೂಲಕ ಪರಿಶೀಲಿಸಿ, ಅಂತಿಮವಾಗಿ ಆಯ್ಕೆ ಮಾಡಿರುವ ಏಳು ವಿಶ್ವವಿದ್ಯಾಲಯಗಳಲ್ಲಿ ಇ– ಆಡಳಿತ ವಿಭಾಗದಲ್ಲಿ ಮಾನ್ಯತೆ ಪಡೆದಿರುವ ಮಂಗಳೂರು ವಿಶ್ವವಿದ್ಯಾನಿಲಯವು, ₹50 ಲಕ್ಷ ಪ್ರೋತ್ಸಾಹಧನ ಪಡೆಯಲಿದೆ.

ADVERTISEMENT

‘ಕೋವಿಡ್–19ರ ಪೂರ್ವದಲ್ಲಿ ಕಾಗದರಹಿತ ಕಚೇರಿ ಅನುಷ್ಠಾನಗೊಂಡಿದ್ದರೂ, ಕೋವಿಡ್ ಸಂದರ್ಭದಲ್ಲಿ ಇದಕ್ಕೆ ವೇಗ ದೊರಕಿತು. ನಂತರ ಒಂದೊಂದೇ ವಿಭಾಗವನ್ನು ಇ–ಆಡಳಿತಕ್ಕೆ ಒಳಪಡಿಸಿದ್ದು, ಈಗ ಸರ್ವರ್ ಡೌನ್‌ನಂತಹ ತುರ್ತು ಸಂದರ್ಭ ಹೊರತುಪಡಿಸಿದರೆ, ಶೇ 100 ಕಾಗದರಹಿತ ವ್ಯವಸ್ಥೆ ಜಾರಿಯಲ್ಲಿದೆ’ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಜಯರಾಜ್ ಅಮೀನ್ ತಿಳಿಸಿದರು.

‘ಇ–ಆಡಳಿತ ಅನುಷ್ಠಾನದಿಂದ ಕಡತಗಳು ಯಾವ ಹಂತದಲ್ಲಿ ಬಾಕಿಯಾಗಿವೆ ಎಂಬುದರ ನಿಖರ ಮಾಹಿತಿ ದೊರೆಯುತ್ತದೆ. ಕಡತಗಳನ್ನು ಟ್ರ್ಯಾಕ್‌ ಮಾಡುವುದು ಕೂಡ ಸುಲಭವಾಗಿದ್ದು, ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಿಸಲು ಸಾಧ್ಯವಾಗಿದೆ. ವಿವಿಯಲ್ಲಿ 2014–15ನೇ ಸಾಲಿನಲ್ಲಿ ಸಕಾಲ ಸೇವೆ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದೆ. ವಿದ್ಯಾರ್ಥಿಗಳ ಪ್ರವೇಶ, ದಾಖಲೆ ಪರಿಶೀಲನೆ, ಸುಗಮ ಪರೀಕ್ಷೆಗೆ ಪ್ರತ್ಯೇಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರತಿ ವಿಭಾಗದಲ್ಲೂ ಕಂಪ್ಯೂಟರ್ ಲ್ಯಾಬ್‌, ಭಾಷಾ ಲ್ಯಾಬ್‌ಗಳನ್ನು ಸ್ಥಾಪಿಸಲಾಗಿದೆ. ಯಾವುದೇ ವಿಭಾಗಕ್ಕೆ ಮಾಹಿತಿ ನೀಡುವುದಾದರೂ ಮುದ್ರಿತ ಪ್ರತಿ ಬದಲಾಗಿ, ಇ–ಮೇಲ್ ಮೂಲಕ ಮಾಹಿತಿ ನೀಡಲಾಗುತ್ತದೆ. ವಿವಿಯಲ್ಲಿ ಇ– ಆಡಳಿತ ಘಟಕ ಇದ್ದು, ಇದಕ್ಕೆ ಪ್ರತ್ಯೇಕ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ. ಇ– ಆಡಳಿತ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರಾಧ್ಯಾಪಕರು, ಸಿಬ್ಬಂದಿಗೆ ಹಲವು ಹಂತಗಳಲ್ಲಿ ತರಬೇತಿ ನೀಡಲಾಗಿದೆ. ಇವೆಲ್ಲ ಅಂಶಗಳನ್ನು ಪರಿಗಣಿಸಿ, ನಮ್ಮ ವಿವಿಯನ್ನು ಆಯ್ಕೆ ಮಾಡಲಾಗಿದೆ. ನಮ್ಮ ವಿವಿಗೆ ಇ– ಆಡಳಿತ ವಿಭಾಗದಲ್ಲಿ 73 ಅಂಕಗಳು ದೊರೆತಿವೆ ಎಂದು ವಿವರಿಸಿದರು.

‘ನಿಖರ ಮಾಹಿತಿ ದೊರೆಯುತ್ತದೆ’
‘ಇ–ಆಡಳಿತ ಅನುಷ್ಠಾನದಿಂದ ಕಡತಗಳು ಯಾವ ಹಂತದಲ್ಲಿ ಬಾಕಿಯಾಗಿವೆ ಎಂಬುದರ ನಿಖರ ಮಾಹಿತಿ ದೊರೆಯುತ್ತದೆ. ಕಡತಗಳನ್ನು ಟ್ರ್ಯಾಕ್‌ ಮಾಡುವುದು ಕೂಡ ಸುಲಭವಾಗಿದ್ದು, ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಿಸಲು ಸಾಧ್ಯವಾಗಿದೆ. ವಿವಿಯಲ್ಲಿ 2014–15ನೇ ಸಾಲಿನಲ್ಲಿ ಸಕಾಲ ಸೇವೆ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದೆ. ವಿದ್ಯಾರ್ಥಿಗಳ ಪ್ರವೇಶ, ದಾಖಲೆ ಪರಿಶೀಲನೆ, ಸುಗಮ ಪರೀಕ್ಷೆಗೆ ಪ್ರತ್ಯೇಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ’ ಎಂದು ಜಯರಾಜ್ ಅಮೀನ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.