ADVERTISEMENT

‘ಮಂಗಳೂರು ಯುವ ದಸರಾ 2024’ ನ.2 ರಂದು

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2024, 16:01 IST
Last Updated 30 ಅಕ್ಟೋಬರ್ 2024, 16:01 IST
ಸುದ್ದಿಗೋಷ್ಠಿಯಲ್ಲಿ ಉಮಾನಾಥ ಕೋಟ್ಯಾನ್‌ ಮಾತನಾಡಿದರು. ಯಶ್‌ರಾಜ್, ನಿಶಾಂತ್‌ ಪುತ್ತೂರು, ಸಂದೇಶ್‌ರಾಜ್‌ ಬಂಗೇರ, ಸಾತ್ವಿಕ್ ಪೂಜಾರಿ, ತಿಲಕ್‌ ಆಚಾರ್ಯ ಭಾಗವಹಿಸಿದ್ದರು
ಸುದ್ದಿಗೋಷ್ಠಿಯಲ್ಲಿ ಉಮಾನಾಥ ಕೋಟ್ಯಾನ್‌ ಮಾತನಾಡಿದರು. ಯಶ್‌ರಾಜ್, ನಿಶಾಂತ್‌ ಪುತ್ತೂರು, ಸಂದೇಶ್‌ರಾಜ್‌ ಬಂಗೇರ, ಸಾತ್ವಿಕ್ ಪೂಜಾರಿ, ತಿಲಕ್‌ ಆಚಾರ್ಯ ಭಾಗವಹಿಸಿದ್ದರು   

ಮಂಗಳೂರು: ‘ಸ್ಯಾಂಡೀಸ್ ಕಂಪನಿ  ಹಾಗೂ ಶಾಸಕ ಉಮಾನಾಥ ಕೋಟ್ಯಾನ್ ಸಾರಥ್ಯದಲ್ಲಿ ಎರಡನೇ ವರ್ಷದ ‘ಮಂಗಳೂರು ಯುವ ದಸರಾ 2024 ಸ್ಟಾರ್ ಮ್ಯೂಸಿಕಲ್ ನೈಟ್’ ಕಾರ್ಯಕ್ರಮವು ಇಲ್ಲಿನ ಕರಾವಳಿ ಉತ್ಸವ ಮೈದಾನದಲ್ಲಿ ನ. 2ರಂದು ಸಂಜೆ 6ರಿಂದ ಹಮ್ಮಿಕೊಳ್ಳಲಾಗಿದೆ. 

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಇಲ್ಲಿ ಬುಧವಾರ ಮಾಹಿತಿ ನೀಡಿದ ಶಾಸಕ ಉಮಾನಾಥ ಕೋಟ್ಯಾನ್‌, ‘ಮೈಸೂರಿನ ಯುವ ದಸರಾ ಮಾದರಿಯಲ್ಲೇ ಈ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕ ಡಾ.ಎಂ.ಮೋಹನ್ ಆಳ್ವ ಅವರಿಗೆ ಈ ಬಾರಿಯ ಮಂಗಳೂರು ಯುವ ದಸರಾ  ಗೌರವವನ್ನು ಅರ್ಪಿಸಲಾಗುವುದು’ ಎಂದರು.

‘ಮಂಗಳೂರು ದಸರಾ ಸಂದರ್ಭದಲ್ಲೇ ಯುವ ದಸರಾ ಆಚರಿಸಲು ದಿನ ನಿಗದಿಪಡಿಸಲಾಗಿತ್ತು. ವಿಧಾನ ಪರಿಷತ್‌ ಉಪಚುನಾವಣೆಯ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಅನಿವಾರ್ಯವಾಗಿ ಕಾರ್ಯಕ್ರಮವನ್ನು ಮುಂದೂಡಬೇಕಾಯಿತು’ ಎಂದು ಅವರು ತಿಳಿಸಿದರು.

ADVERTISEMENT

‘ಮೈಸೂರಿನ ಸಂಸದರಾಗಿರುವ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಅಶ್ವತ್ಥನಾರಾಯಣ್, ಸಿನಿಮಾ ನಿರ್ದೇಶಕ ತರುಣ್ ಸುಧೀರ್, ಸಿನಿಮಾ ನಟಿ ಸೋನಲ್ ಮೊಂತೇರೊ, ಸಿನಿಮಾ ನಟರಾದ ಪೃಥ್ವಿ ಅಂಬರ್, ಗಾಯಕರಾದ ಸುಪ್ರಿಯಾ ರಾಮ್, ಐಶ್ವರ್ಯ ರಂಗರಾಜನ್, ನಿಶಾನ್ ರೈ, ರೂಪೇಶ್ ಶೆಟ್ಟಿ ಹಾಗೂ ಸ್ಯಾಂಡಲ್‌ವುಡ್‌ ನಟರು ಭಾಗವಹಿಸಲಿದ್ದಾರೆ’ ಎಂದರು.

ಸ್ಯಾಂಡಿಸ್‌ ಕಂಪನಿಯ ಮಾಲೀಕ ಸಂದೇಶ್‌ ರಾಜ್‌ ಬಂಗೇರ, ‘ಇಲ್ಲಿನ ಸಿಝಲಿಂಗ್ ಗೈಸ್ ಡ್ಯಾನ್ಸ್ ಸ್ಟುಡಿಯೊದವರು ಮೈನವಿರೇಳಿಸುವ ನೃತ್ಯವೈಭವವನ್ನು ಪ್ರಸ್ತುತಿ ಪಡಿಸಲಿದ್ದಾರೆ. ಆಕರ್ಷಕ ಸಿಡಿಮದ್ದು ಪ್ರದರ್ಶನವೂ ಇರಲಿದೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಯಶ್‌ರಾಜ್, ನಿಶಾಂತ್‌ ಪುತ್ತೂರು, ಸಾತ್ವಿಕ್ ಪೂಜಾರಿ, ತಿಲಕ್‌ ಆಚಾರ್ಯ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.