ADVERTISEMENT

ನ.10ಕ್ಕೆ ಮಂಗಳೂರು ಮ್ಯಾರಥಾನ್: ಅಭಿಲಾಷ್ ಡೊಮಿನಿಕ್

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2024, 20:05 IST
Last Updated 7 ನವೆಂಬರ್ 2024, 20:05 IST
ಸುದ್ದಿಗೋಷ್ಠಿಯಲ್ಲಿ ರಮೇಶ್‌ಬಾಬು ಮಾತನಾಡಿದರು
ಸುದ್ದಿಗೋಷ್ಠಿಯಲ್ಲಿ ರಮೇಶ್‌ಬಾಬು ಮಾತನಾಡಿದರು   

ಮಂಗಳೂರು: ‘ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಓಟಗಾರರು ಪಾಲ್ಗೊಳ್ಳಲಿರುವ ‘ನೀವಿಯಸ್ ಮಂಗಳೂರು ಮ್ಯಾರಥಾನ್’ ನ.10ರಂದು ನಗರದಲ್ಲಿ ನಡೆಯಲಿದೆ. ಮ್ಯಾರಥಾನ್‌ನಲ್ಲಿ 5,000ಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ’ ಎಂದು ಮಂಗಳೂರು ರನ್ನರ್ಸ್ ಕ್ಲಬ್‌ನ ರೇಸ್ ನಿರ್ದೇಶಕ ಅಭಿಲಾಷ್ ಡೊಮಿನಿಕ್ ಹೇಳಿದರು.

8ರಿಂದ 80 ವರ್ಷ ವಯೋಮಾನದವರಿಗೆ ಭಾಗವಹಿಸಲು ಅವಕಾಶವಿದೆ. ಮುಂಜಾನೆ 4 ಗಂಟೆಗೆ ಪ್ರಾರಂಭವಾಗುವ ಮ್ಯಾರಥಾನ್‌ನಲ್ಲಿ ಸ್ಥಳೀಯರೊಂದಿಗೆ, ಭಾರತದ 18 ರಾಜ್ಯಗಳ ಹಾಗೂ ಜಪಾನ್, ಇಥಿಯೋಪಿಯಾ, ಕೆನ್ಯಾ, ಸ್ವಿಟ್ಜರ್ಲೆಂಡ್, ಸ್ಪೇನ್‌ ದೇಶಗಳ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ ಎಂದು ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಫುಲ್ ಮ್ಯಾರಥಾನ್ (42.195 ಕಿ.ಮೀ), 20 ಮೈಲರ್, ಹಾಫ್ ಮ್ಯಾರಥಾನ್ (21.097 ಕಿ.ಮೀ), 10ಕೆ, 5ಕೆ  ಜೊತೆಗೆ ಎರಡು ಕಿ.ಮೀ ದೂರದ ‘ಗಮ್ಮತ್ ರನ್’ ಮತ್ತು ವಿದ್ಯಾರ್ಥಿಗಳ ರನ್‌ ಇರಲಿದೆ. ವಿವಿಧ ವಿಭಾಗಗಳ ಸ್ಪರ್ಧೆಯಲ್ಲಿ ವಿಜೇತರಿಗೆ ಒಟ್ಟು ₹12 ಲಕ್ಷ ಮೊತ್ತದ ಬಹುಮಾನ ವಿತರಿಸಲಾಗುವುದು ಎಂದರು.

ADVERTISEMENT

ನಿರ್ದೇಶಕ ರಮೇಶ್ ಬಾಬು, ನೀವಿಯಸ್ ಸೊಲ್ಯೂಷನ್‌ನ ಮಾರ್ಕೆಟಿಂಗ್ ಡೈರೆಕ್ಟರ್ ಅಭಿಷೇಕ್ ಹೆಗ್ಡೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.