ಮಂಗಳೂರು: ‘ಬೌಲಿನ್ ಸ್ಫೋರ್ಟ್ಸ್ ಆ್ಯಂಡ್ ಅಡ್ವೆಂಚರ್’ನ ಸಂಸ್ಥಾಪಕ ಸುಹಾನ್ ಸುಧಾಕರ್ ಅವರು ಹಿಮಾಲಯದ ಲಡಾಖ್‌ನ ಡ್ರಾಸ್ ಪ್ರದೇಶದಲ್ಲಿರುವ ಮಾಚೋಯಿ ಶಿಖರವನ್ನೇರಿದ ಸಾಧನೆ ಮಾಡಿದ್ದಾರೆ.
ಸಮುದ್ರ ಮಟ್ಟದಿಂದ 5,130 ಮೀ (16,863 ಅಡಿ) ಎತ್ತರವಿರುವ ಈ ಶಿಖರವು ಕ್ಲಿಷ್ಟಕರ ಭೌಗೋಳಿಕ ಸನ್ನಿವೇಶಗಳಿಂದ ಕೂಡಿದೆ. ಇಲ್ಲಿನ ವಾತಾವರಣದಲ್ಲಿ ಆಮ್ಲಜನಕದ ಮಟ್ಟವು ತೀರಾ ಕಡಿಮೆ ಇರುತ್ತದೆ. ಸೈಬೀರಿಯಾ ಹೊರತುಪಡಿಸಿದರೆ ಜಗತ್ತಿನಲ್ಲೇ ಅತ್ಯಂತ ಕಡಿಮೆ ಉಷ್ಣಾಂಶದಿಂದ ಕೂಡಿದ ಪ್ರದೇಶಗಳಲ್ಲಿ ಇದು ಕೂಡಾ ಒಂದು. ಇಲ್ಲಿ ಉಷ್ಣಾಂಶವು – 45 ಡಿಗ್ರಿ ಸೆಲ್ಸಿಯಸ್‌ವರೆಯೂ ಇಳಿಯುತ್ತದೆ. ಕರಾವಳಿಯವರಾದ ಸುಹಾನ್ ಅವರು ಈ ಎಲ್ಲ ಸವಾಲುಗಳನ್ನು ಮೀರಿ ಶಿಖರದ ತುದಿಯನ್ನು ತಲುಪಿದ್ದಾರೆ. ಇದಕ್ಕಾಗಿ ಅವರು 6 ತಿಂಗಳು ಕಠಿಣ ತಯಾರಿ ನಡೆಸಿ ಶಿಖರವೇರುವ ಕೌಶಲ ಕರಗತಮಾಡಿಕೊಂಡಿದ್ದರು.
ಸಾಹಸ ಕ್ರೀಡೆಗಳಲ್ಲಿ ಒಲವು ಹೊಂದಿರುವವರು ಬೌಲಿನ್ ಸ್ಫೋರ್ಟ್ಸ್ ಆ್ಯಂಡ್ ಅಡ್ವೆಂಚರ್ ಸಂಸ್ಥೆಯನ್ನು ಇನ್ಸ್ಟಾಗ್ರಾಂನಲ್ಲಿ (@bowline.adventure) ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.