ADVERTISEMENT

ಪೂರ್ಣಿಮಾ ಸುರೇಶ್, ಕಾವ್ಯಶ್ರೀಗೆ ಮುದ್ದಣ ಕಾವ್ಯ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 0:28 IST
Last Updated 26 ಅಕ್ಟೋಬರ್ 2024, 0:28 IST
ಪೂರ್ಣಿಮಾ
ಪೂರ್ಣಿಮಾ   

ಮೂಡುಬಿದಿರೆ: ಕಾಂತಾವರ ಕನ್ನಡ ಸಂಘದ ಪಠೇಲ್ ಪುನರೂರು ವಾಸುದೇವರಾವ್ ಟ್ರಸ್ಟ್ ಪ್ರಾಯೋಜಕತ್ವದ 2024ರ ಸಾಲಿನ ಮುದ್ದಣ ಕಾವ್ಯ ಪ್ರಶಸ್ತಿಗೆ ಉಡುಪಿಯ ಪೂರ್ಣಿಮಾ ಸುರೇಶ್ ಅವರ ‘ಸಂತೆಯೊಳಗಿನ ಏಕಾಂತ’ ಮತ್ತು ಕಲಬುರಗಿಯ ಕಾವ್ಯಶ್ರೀ ಮಹಾಗಾಂವಕರ ಅವರ ‘ಒಲವ ಒರತೆಯ ಜಾಡಿನಲ್ಲಿ’ ಎಂಬ ಎರಡು ಹಸ್ತಪ್ರತಿಗಳನ್ನು ಆಯ್ಕೆ ಮಾಡಲಾಗಿದೆ.

ಈ ಎರಡೂ ಹಸ್ತಪ್ರತಿಗಳು ತೀರ್ಪುಗಾರರಿಂದ ಸಮಾನ ಅಂಕಗಳನ್ನು ಪಡೆದಿರುವುದರಿಂದ ಎರಡೂ ಹಸ್ತಪ್ರತಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಂಘದ ಸ್ಥಾಪಕಾಧ್ಯಕ್ಷ ಡಾ.ನಾ.ಮೊಗಸಾಲೆ ತಿಳಿಸಿದ್ದಾರೆ.

ಸ್ಪರ್ಧೆಗೆ 59 ಹಸ್ತಪ್ರತಿಗಳು ಬಂದಿದ್ದು, ವಿಮರ್ಶಕ ಮತ್ತು ಕತೆಗಾರ ಬೆಳಗೋಡು ರಮೇಶ ಭಟ್ ಮೈಸೂರು, ವಿಕಾಸ ಹೊಸಮನಿ ಹಾವೇರಿ ಹಾಗೂ ರವಿಶಂಕರ ಜಿ.ಕೆ.ಉಜಿರೆ ಅವರು ನೀಡಿದ ಅಂಕಗಳ ಆಧಾರದಲ್ಲಿ ಪ್ರಶಸ್ತಿಯನ್ನು ನಿರ್ಣಯಿಸಲಾಗಿದೆ. ಪ್ರಶಸ್ತಿಯು ತಲಾ ಹತ್ತು ಸಾವಿರ ರೂಪಾಯಿ ಗೌರವ ಸಂಭಾವನೆ, ತಾಮ್ರಪತ್ರ ಮತ್ತು ಸನ್ಮಾನವನ್ನು ಒಳಗೊಂಡಿದೆ.

ADVERTISEMENT

ಪ್ರಶಸ್ತಿ ಪ್ರದಾನ ಸಮಾರಂಭವು 2025ರ ಫೆಭ್ರುವರಿಯಲ್ಲಿ ಕಾಂತಾವರದ ‘ಕನ್ನಡ ಭವನ’ದಲ್ಲಿ ನಡೆಯಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ತಿಳಿಸಿದ್ದಾರೆ.

ಕಾವ್ಯಶ್ರೀ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.