ಮೂಲ್ಕಿ: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅಕ್ಕಸಾಲಿಗರ ಕೇರಿ ಬಳಿ ಚಿರತೆ ಕಾಟ ಹೆಚ್ಚಿದ್ದು ಸ್ಥಳೀಯರು ದೂರು ನೀಡಿದ ಮೇರೆಗೆ ಅರಣ್ಯ ಅಧಿಕಾರಿಗಳು ಎರಡು ಬೋನು ಇರಿಸಿದ್ದಾರೆ.
ಎರಡು ದಿಗಳಿಂದ ಅಕ್ಕಸಾಲಿಗರ ಕೇರಿ ಬಳಿ ಸಂಜೆಹೊತ್ತು ನಾಲ್ಕು ಚಿರತೆಗಳು ಕಾಣಿಸಿಕೊಂಡಿವೆ. ಸ್ಕೂಟರ್‌ನಲ್ಲಿ ಮನೆ ಕಡೆ ಹೋಗುತ್ತಿರುವ ಅಮೃತ್ ಕಾಮತ್ ಅವರಿಗೆ ಚಿರತೆ ಕಾಣಸಿಕ್ಕಿವೆ ಎನ್ನಲಾಗಿದೆ.
ಚಿರತೆ ಹಾವಳಿಯಿಂದ ಸಂಜೆ ಹೊತ್ತು ನಾಗರಿಕರು ಮನೆಯಿಂದ ಹೊರಬರಲು ಹೆದರುತ್ತಿದ್ದು ಪರಿಸರದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಇಲ್ಲಿನ ಕೆಲವು ಮನೆಗಳಿಂದ ನಾಯಿ ಹಾಗೂ ಬೆಕ್ಕು ನಾಪತ್ತೆಯಾಗಿದ್ದು ಚಿರತೆಗೆ ಆಹಾರವಾಗಿರುವ ಶಂಕೆ ವ್ಯಕ್ತವಾಗಿದೆ.
ಅರಣ್ಯಾಧಿಕಾರಿ ನಾಗೇಶ್ ಬಿಲ್ಲವ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಇಲಾಖೆ ವ್ಯಾಪ್ತಿಯಲ್ಲಿ 34 ಗ್ರಾಮಗಳು ಇವೆ. ಸ್ಥಳೀಯರ ಸಹಕಾರ ಇದ್ದರೆ ಕಾರ್ಯಾಚರಣೆ ಸುಲಭ ಎಂದರು. ಮುಲ್ಕಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸತೀಶ್ ಅಂಚನ್, ಮಾಜಿ ಅಧ್ಯಕ್ಷ ಸುಭಾಷ್ ಶೆಟ್ಟಿ, ಸದಸ್ಯ ಬಾಲಚಂದ್ರ ಕಾಮತ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.