ಮೂಲ್ಕಿ: ‘ಪಾವಂಜೆ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನವನ್ನು ₹ 5 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಲಾಗುತ್ತಿದೆ. ಮೊದಲ ಹಂತದ ಎಲ್ಲಾ ಕಾಮಗಾರಿಯನ್ನು ಮುಗಿಸಿ ಬ್ರಹ್ಮ ಕಲಶೋತ್ಸವದ ಕಾರ್ಯವನ್ನು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ನಡೆಸಲಾಗುವುದು. ಮುಂದಿನ ದಿನದಲ್ಲಿ ಎರಡನೇ ಹಂತವನ್ನು ಆರಂಭಿಸಲಾಗುವುದು’ ಎಂದು ದೇವಳದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪ್ರಕಾಶ್ ಎನ್. ಶೆಟ್ಟಿ ಹೇಳಿದರು.
ಮೂಲ್ಕಿ ಬಳಿಯ ಪಾವಂಜೆ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ವ್ಯವಸ್ಥಾಪನಾ ಸಮಿತಿಯ ಸದಸ್ಯ, ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನಾನಿಲ್ ಮಾಹಿತಿ ನೀಡಿ, ‘ಬ್ರಹ್ಮಕಲಶೋತ್ಸವಕ್ಕೆ ಸಿದ್ಧತೆ ನಡೆಯುತ್ತಿದ್ದು, 17 ಉಪ ಸಮಿತಿಗಳನ್ನು ರಚಿಸಿ, ಜವಾಬ್ದಾರಿಯನ್ನು ಹಂಚಲಾಗಿದೆ ಎಂದರು.
ದೇವಸ್ಥಾನದ ಬೆಟ್ಟಕ್ಕೆ ರಸ್ತೆ ನಿರ್ಮಾಣ, ಪೂರ್ವ, ಉತ್ತರ, ಪಶ್ಚಿಮದ ರಾಜಗೋಪುರಗಳಿಗೆ ಕಲಾಕೃತಿಯ ನವೀಕರಣ, ಹಳೆ ಮೆಟ್ಟಿಲುಗಳನ್ನು ವಿಸ್ತರಣೆ, ಒಳಾಂಗಣ ಮತ್ತು ಹೊರಾಂಗಣಕ್ಕೆ ಹಾಸುಕಲ್ಲು, ಚಂದ್ರಮಂಡಲ, ರಕ್ತೇಶ್ವರಿ ಗುಡಿ, ನಾಗನ ಕಟ್ಟೆಗಳ ನಿರ್ಮಾಣ, ಗಣಪತಿ ದೇವರ ಮುಖಮಂಟಪ, ವಸಂತ ಮಂಟಪ, ಸಭಾಂಗಣ, ಪಾಕಶಾಲೆಗಳ ನವೀಕರಣ ಮತ್ತಿತರ ಕೆಲಸಗಳನ್ನು ಮೊದಲ ಹಂತದಲ್ಲಿ ನಿರ್ಮಿಸಲಾಗಿದೆ ಎಂದರು.
ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಿ. ಸೂರ್ಯಕುಮಾರ್, ಪ್ರಧಾನ ಅರ್ಚಕ ವಾಸುದೇವ ಭಟ್, ಜೊತೆ ಕಾರ್ಯದರ್ಶಿ ರಾಮದಾಸ್ ಪಾವಂಜೆ ಮಾತನಾಡಿದರು.
ಪವಿತ್ರಪಾಣಿ ಗಣೇಶ್ ಭಟ್, ವ್ಯವಸ್ಥಾಪನಾ ಸಮಿತಿಯ ಜ್ಯೋತಿ ರಾಮಚಂದ್ರ, ರಘು ಕೆ. ದೇವಾಡಿಗ, ಪಿ. ಗೋಪಾಲಕೃಷ್ಣ ರಾವ್, ಸುಕುಮಾರ್, ಸುಲೋಚನ ಮಹಾಬಲ, ಬ್ರಹ್ಮಕಲಶೋತ್ಸವ ಸಮಿತಿಯ ಎಚ್. ಭಾಸ್ಕರ ಸಾಲ್ಯಾನ್, ಸುಧಾಕರ ಆರ್. ಅಮೀನ್, ಮೋಹನ್ ಬಂಗೇರ, ಪ್ರಮೀಳಾ ಪೂಜಾರಿ, ಜನಾರ್ಧನ ಪಡುಪಣಂಬೂರು, ಮೋಹನ್ ರಾವ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.