ADVERTISEMENT

ವಿಟ್ಲ: ಕೊಲೆ ಯತ್ನ ಪ್ರಕರಣ: ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 23 ಜೂನ್ 2022, 2:52 IST
Last Updated 23 ಜೂನ್ 2022, 2:52 IST

ವಿಟ್ಲ: ಸಾಲೆತ್ತೂರಿನಲ್ಲಿ ನಡೆದ ಬಜರಂಗದಳದ ಸಂಚಾಲಕನ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.

ಸಾಲೆತ್ತೂರಿನಲ್ಲಿ ಎರಡು ಗುಂಪಿನ ಯುವಕರ ನಡುವೆ ಮಾರಾಮಾರಿ ನಡೆದಿದ್ದು, ಇತ್ತಂಡಗಳವರೂ ದೂರು ನೀಡಿದ್ದಾರೆ.

ಒಟ್ಟು 19 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿತ್ತು.

ADVERTISEMENT

ಬಜರಂಗದಳ ಸಂಚಾಲಕ ಚಂದ್ರಹಾಸ ಕನ್ಯಾನ ನೀಡಿದ ದೂರಿನಂತೆ ಕಡಂಬು ನಿವಾಸಿ ಗಣೇಶ (27), ಕುಡ್ತಮುಗೇರು ನಿವಾಸಿ ದಿನೇಶ (19) ಪಡಾರು ನಿವಾಸಿ ವಿನೀತ್ (19), ಕೇಪು ಕೊಡಂದೂರು ನಿವಾಸಿ ಶಶಿಕುಮಾರ್ ಎಂಬುವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

77 ಅರ್ಜಿ ತಿರಸ್ಕೃತ

ಬಂಟ್ವಾಳ: ಇಲ್ಲಿನ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಕಳೆದ ಸಾಲಿನ ಮುಂಗಾರು ಮತ್ತು ಹಿಂಗಾರು ಸಹಿತ ಬೇಸಿಗೆ ಹಂಗಾಮಿನಲ್ಲಿ ಸಲ್ಲಿಸಿದ್ದ ಒಟ್ಟು 77 ಬೆಳೆ ವಿಮೆ ಅರ್ಜಿಗಳು ವಿಮಾ ಸಂಸ್ಥೆಯಿಂದ ತಿರಸ್ಕೃತಗೊಂಡಿವೆ. ಈ ಬಗ್ಗೆ ರೈತರು ಆಕ್ಷೇಪಣೆ ಇದ್ದಲ್ಲಿ ಅರ್ಜಿ ಮರು ಪರಿಶೀಲನೆಗೆ ದಾಖಲೆ ಪತ್ರ ಸಹಿತ ಕೃಷಿ ಇಲಾಖೆಗೆ ಮನವಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಬಂಟ್ವಾಳ ಮತ್ತು ಪಾಣೆಮಂಗಳೂರು ಹಾಗೂ ವಿಟ್ಲ ಹೋಬಳಿ ರೈತ ಸಂಪರ್ಕ ಕೇಂದ್ರ ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.