ಮಂಗಳೂರು: ವರ್ಷಂಪ್ರತಿ ಕರಾವಳಿಯಲ್ಲಿ ಶ್ರದ್ಧಾ ಭಕ್ತಿ ಹಾಗೂ ಅದ್ದೂರಿಯಿಂದ ಆಚರಿಸುತ್ತಿದ್ದ ನಾಗರಪಂಚಮಿಯನ್ನು, ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಸರಳವಾಗಿ ಆರಾಧಿಸಲಾಯಿತು.
ದೇವಸ್ಥಾನಗಳು, ನಾಗಕಟ್ಟೆ, ನಾಗಬನ ವಿವಿಧೆಡೆಗಳಲ್ಲಿ ಶನಿವಾರ ಸಂಬಂಧಿಸಿದ ಪ್ರಮುಖರು ಹಾಗೂ ಆರಾಧಕರು ಮಾತ್ರವೇ ಇದ್ದು, ಆರಾಧನಾ ವಿಧಿವಿಧಾನ ನೆರವೇರಿಸಿದರು.
ಸಹಸ್ರಾರು ಜನ ಸೇರುತ್ತಿದ್ದ ನಗರದ ಕುಡುಪು, ಕದ್ರಿ, ಶರವು ದೇವಸ್ಥಾನಗಳ ನಾಗಕಟ್ಟೆ, ವಿವಿಧ ನಾಗಬನಗಳಲ್ಲಿ ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿದ್ದು, ಹಲವರು ದೂರದಿಂದಲೇ ನಮಿಸಿ ತೆರಳಿದರು. ಇನ್ನೂ ಕೆಲವರು ಮೆಟ್ಟಿಲಲ್ಲೇ ಸೀಯಾಳ, ಹಾಲು, ಹೂ ಇಟ್ಟು ತೆರಳಿದರು.
ಪ್ರತಿ ವರ್ಷ ಹಾಲು ಹಾಗೂ ಸೀಯಾಳಕ್ಕೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಕಂಡುಬರುತ್ತಿದ್ದು, ಈ ಬಾರಿ ದಟ್ಟಣೆ ಇರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.