ADVERTISEMENT

ನವ‌ ಮಂಗಳೂರು ಬಂದರು ಪ್ರವೇಶ ದ್ವಾರಕ್ಕೆ ಕೇಂದ್ರ ಸಚಿವ ಸೋನೊವಾಲ್ ಶಿಲಾನ್ಯಾಸ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 11:07 IST
Last Updated 24 ಸೆಪ್ಟೆಂಬರ್ 2021, 11:07 IST
ಜಲಮಾರ್ಗ ಮತ್ತು ಆಯುಷ್ ಸಚಿವ ಸರ್ಬಾನಂದ ಸೋನೊವಾಲ್ ಅವರು ಶುಕ್ರವಾರ ಶಿಲಾನ್ಯಾಸ ನೆರವೇರಿಸಿದರು‌.
ಜಲಮಾರ್ಗ ಮತ್ತು ಆಯುಷ್ ಸಚಿವ ಸರ್ಬಾನಂದ ಸೋನೊವಾಲ್ ಅವರು ಶುಕ್ರವಾರ ಶಿಲಾನ್ಯಾಸ ನೆರವೇರಿಸಿದರು‌.   

ಮಂಗಳೂರು: ನವ‌ ಮಂಗಳೂರು ಬಂದರು (ಎನ್ಎಂಪಿಟಿ) ಮಂಡಳಿಯ ನೂತನ ಪ್ರವೇಶ ದ್ವಾರಕ್ಕೆ ಕೇಂದ್ರ ಬಂದರು, ಜಲಮಾರ್ಗ ಮತ್ತು ಆಯುಷ್ ಸಚಿವ ಸರ್ಬಾನಂದ ಸೋನೊವಾಲ್ ಅವರು ಶುಕ್ರವಾರ ಶಿಲಾನ್ಯಾಸ ನೆರವೇರಿಸಿದರು‌. ಸಂಸದ ನಳಿನ್ ಕುಮಾರ್ ಕಟೀಲ್ ಹಾಜರಿದ್ದರು.

ಪ್ರವೇಶ ದ್ವಾರವು 1,100 ಚದರ ಅಡಿ‌ ವಿಸ್ತೀರ್ಣದಲ್ಲಿ ₹ 3.25 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಉದ್ದೇಶಿತ ಪ್ರವೇಶ ದ್ವಾರವು ಎರಡು ಆಗಮನ ಪಥ ಮತ್ತು ಎರಡು ನಿರ್ಗಮನ ಪಥ ಸೇರಿದಂತೆ ಒಟ್ಟು ನಾಲ್ಕು ಪಥಗಳನ್ನು ಹೊಂದಲಿದೆ.

ನಂತರ ಸಚಿವರು ಎನ್ ಎಂಪಿಟಿ ಆವರಣದೊಳಗಿನ ಚಟುವಟಿಕೆ ವೀಕ್ಷಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.