ಕಾಸರಗೋಡು: ನೀಲೇಶ್ವರ ಅಂಞೂಟ್ಟಂಬಲಂ ವೀರರ್ ಕಾವು ದೇವಾಲಯದಲ್ಲಿ ನಡೆದ ಸುಡುಮದ್ದು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.
ಕಿಣಾವೂರು ಮುಂಡೋಟ್ ನಿವಾಸಿ ರಂಜಿತ್ (28) ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ರಂಜಿತ್ ಅವರು ಕಾಸರಗೋಡು ವಿದ್ಯುತ್ ಇಲಾಖೆ ವಾಹನ ಚಾಲಕರಾಗಿದ್ದರು. ಅವರಿಗೆ ಪತ್ನಿ ಇದ್ದಾರೆ. ಪ್ರಕರಣದಲ್ಲಿ ಗಂಭೀರ ಗಾಯಗೊಂಡಿದ್ದ ಕರಿಂದಳಂ ಮಂಞಳಂಕೋಟೆ ಬಿಜು, ಕಿಣಾವೂರು ರತೀಶ್, ಸಂದೀಪ್, ಚೆರುವತ್ತೂರು ತುರ್ತಿ ಒರ್ಕುಳಂ ನಿವಾಸಿ ಶಿಬಿನ್ ರಾಜ್ ಕೆಲ ದಿನಗಳ ಹಿಂದೆ ಮೃತಪಟ್ಟಿದ್ದರು.
ಇಬ್ಬರು ಆರೋಪಿಗಳಿಗೆ ಬಂಧನ ವಾರಂಟ್
ಕಾಸರಗೋಡು: ನೀಲೇಶ್ವರ ಅಂಞೂಟ್ಟಂಬಲಂ ವೀರರ್ ಕಾವು ದೇವಾಲಯದಲ್ಲಿ ನಡೆದ ಸುಡುಮದ್ದು ದುರಂತ ಪ್ರಕರಣಕ್ಕೆ ಸಂಬಂಧಿಸಿ ಜಾಮೀನು ಪಡೆದಿದ್ದ ಇಬ್ಬರು ಆರೋಪಿಗಳ ವಿರುದ್ಧ ಹೊಸದುರ್ಗ ಪ್ರಥಮ ದರ್ಜೆ (ದ್ವಿತೀಯ)ನ್ಯಾಯಾಲಯ ಬಂಧನ ವಾರಂಟ್ ಪ್ರಕಟಿಸಿದೆ.
ದೇವಾಲಯ ಸಮಿತಿ ಅಧ್ಯಕ್ಷ ಪಿ.ಕೆ.ಚಂದ್ರಶೇಖರನ್, ಕಾರ್ಯದರ್ಶಿ ಕೆ.ಟಿ.ಭರತನ್ ಎಂಬುವರ ವಿರುದ್ಧ ವಾರಂಟ್ ಜಾರಿಗೊಂಡಿದೆ. ಈ ಹಿಂದೆ ಹೊಸದುರ್ಗ ಪ್ರಥಮ ದರ್ಜೆ ನ್ಯಾಯಾಲಯ ಅವರಿಗೆ ನೀಡಿದ್ದ ಜಾಮೀನುನನ್ನು ಕಾಸರಗೋಡು ಜಿಲ್ಲಾ ಪ್ರಧಾನ ಸೆಷನ್ಸ್ ನ್ಯಾಯಾಲಯ ರದ್ದುಗೊಳಿಸಿತ್ತು.
ಇಬ್ಬರಿಗೆ ಗಂಭೀರ ಗಾಯ
ಕಾಸರಗೋಡು: ನೀಲೇಶ್ವರ ರಾಜಾ ರಸ್ತೆಯಲ್ಲಿ ನಿಯಂತ್ರಣ ಕಳೆದುಕೊಂಡ ಸ್ಕೂಟರ್ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಸವಾರರಾದ ಸ್ಥಳೀಯ ಚೀರ್ಮಕಾವ್ ನಿವಾಸಿ ಮಿಥುನ್, ಪುದುಕೈ ನಿವಾಸಿ ದೀಪೇಶ್ ಗಂಭೀರ ಗಾಯಗೊಂಡು ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.