ಮಂಗಳೂರು: ಸುರತ್ಕಲ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕದ (ಎನ್‌ಐಟಿಕೆ) 22ನೇ ಘಟಿಕೋತ್ಸವವು ಇದೇ 23ರಂದು ಸಂಸ್ಥೆಯ ಸಿಲ್ವರ್ ಜುಬಿಲಿ ಸಭಾಂಗಣದಲ್ಲಿ ನಡೆಯಲಿದೆ.
ಈ ಕುರಿತು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾಹಿತಿ ನೀಡಿದ ಎನ್‌ಐಟಿಕೆಯ ನಿರ್ದೇಶಕ ಪ್ರೊ.ಬಿ.ರವಿ, ‘ಘಟಿಕೋತ್ಸವದಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಸ್ನಾತಕೋತ್ತರ ಮತ್ತು ಪಿಎಚ್.ಡಿ ವಿದ್ಯಾರ್ಥಿಗಳಿಗೆ ಹಾಗೂ ಮಧ್ಯಾಹ್ನ 3ರಿಂದ ಪದವಿ (ಯು.ಜಿ) ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಪ್ರದಾನ ಮಾಡಲಿದ್ದೇವೆ. ಸ್ನಾತಕೋತ್ತರ ವಿಭಾಗದ ಘಟಿಕೋತ್ಸವದಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಪ್ರೊ.ಗೋವಿಂದನ್ ರಂಗರಾಜನ್ ಹಾಗೂ ಸಿಕಂದರಾಬಾದ್‌ನ ಕಿಮ್ಸ್ ಫೌಂಡೇಷನ್ ಮತ್ತು ರಿಸರ್ಚ್ ಸೆಂಟರ್ (ಕೆಎಫ್‌ಆರ್‌ಸಿ) ಅಧ್ಯಕ್ಷ ಭುಜಂಗ ರಾವ್ ವೆಪಕೊಮ್ಮ ಅತಿಥಿಗಳಾಗಿ ಭಾಗವಹಿಸುವರು’ ಎಂದರು.
ಪದವಿ ವಿಭಾಗದ ಘಟಿಕೋತ್ಸವದಲ್ಲಿ ಬಾಹ್ಯಾಕಾಶ ಆಯೋಗದ ಸದಸ್ಯ ಎ.ಎಸ್.ಕಿರಣ್ ಕುಮಾರ್ ಅತಿಥಿಯಾಗಿ ಭಾಗವಹಿಸಲಿದ್ದು, ಜೋಧಪುರದ ಇಂಡಿಯನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯ ನಿರ್ದೇಶಕ ಪ್ರೊ.ಅವಿನಾಶ್ ಕುಮಾರ್ ಅಗರ್ವಾಲ್ ಅತಿಥಿಗಳಾಗಿ ಭಾಗವಹಿಸುವರು’ ಎಂದರು.
ಸುದ್ದಿಗೋಷ್ಠಿಯಲ್ಲಿ ಎನ್‌ಐಟಿಕೆ ಪ್ರಾಧ್ಯಾಪಕರಾದ ಪ್ರೊ.ಅರುಣ್ ಇಸ್ಲೂರು, ಪ್ರೊ. ಸೈದಕ್ ದತ್ತ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ವೈಷ್ಣವಿ ಭಾಗವಹಿಸಿದ್ದರು.
2078 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
ಎನ್‌ಐಟಿಕೆಯ 22ನೇ ಘಟಿಕೋತ್ಸವದಲ್ಲಿ ಒಟ್ಟು 2078 ವಿದ್ಯಾರ್ಥಿಗಳು ಪದವಿ ಸ್ವೀಕರಿಸಲಿದ್ದಾರೆ. ಇದರಲ್ಲಿ 1002 ಬಿ.ಟೆಕ್ ಪದವಿಗಳು 758 ಎಂ.ಟೆಕ್ ಮತ್ತು ಎಂ.ಟೆಕ್ (ಆರ್) ಪದವಿಗಳು. 179 ಇತರ (ಎಂ.ಬಿ.ಎ ಎಂ.ಸಿ.ಎ ಎಂ.ಎಸ್ಸಿ) ಸ್ನಾತಕೋತ್ತರ ಪದವಿಗಳು 139 ಪಿಎಚ್.ಡಿ 195 ಇತರ ಬಿ.ಟೆಕ್ ಪದವಿಗಳು ಮತ್ತು 5 ಬಿ.ಟೆಕ್ (ಆನರ್ಸ್) ಪದವಿಗಳು ಸೇರಿವೆ. 9 ಬಿ.ಟೆಕ್ ವಿದ್ಯಾರ್ಥಿಗಳು ಮತ್ತು 31 ಸ್ನಾತಕೋತ್ತರ ವಿದ್ಯಾರ್ಥಿಗಳು ಅತ್ಯುನ್ನತ ಸಿಜಿಪಿಎ ಪಡೆದಿದ್ದು ನಾನಾ ಸಂಸ್ಥೆಗಳು ಪ್ರಾಯೋಜಿಸಿರುವ ಚಿನ್ನದ ಪದಕಗಳು ಮತ್ತು ಪದಕಗಳನ್ನು ಪಡೆಯಲಿದ್ದಾರೆ ಎಂದು ಪ್ರೊ. ಬಿ.ರವಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.