ADVERTISEMENT

ಬಜಪೆ: ಹೆದ್ದಾರಿ ಅಂಚಿನಲ್ಲಿ ಚರಂಡಿ ಮಾಯ!

​ಪ್ರಜಾವಾಣಿ ವಾರ್ತೆ
Published 24 ಮೇ 2024, 14:15 IST
Last Updated 24 ಮೇ 2024, 14:15 IST
ಚರಂಡಿ ಇಲ್ಲದ ಕಾರಣ ರಸ್ತೆಗೆ ನೀರಿನೊಂದಿಗೆ ಮಣ್ಣು ಬಂದು ಸೇರಿರುವುದು
ಚರಂಡಿ ಇಲ್ಲದ ಕಾರಣ ರಸ್ತೆಗೆ ನೀರಿನೊಂದಿಗೆ ಮಣ್ಣು ಬಂದು ಸೇರಿರುವುದು   

ಬಜಪೆ: ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯು ಇಲ್ಲಿನ ಚರಂಡಿ ಅವ್ಯವಸ್ಥೆಯನ್ನು ತೆರೆದು ತೋರಿಸಿದೆ. ಇಲ್ಲಿ ಪ್ರಮುಖ ರಸ್ತೆಗಳ ಬದಿಯಲ್ಲಿ ಚರಂಡಿ ಇಲ್ಲದೇ ಇರುವುದರಿಂದ ರಸ್ತೆಯ ಮೇಲೆಲ್ಲ ಮಣ್ಣು ತುಂಬಿಕೊಂಡಿದೆ.

ಜೋರು ಮಳೆ ಬರುವಾಗ ನೀರು ರಸ್ತೆಯ ಮೇಲೆಯೇ ಹರಿಯುತ್ತದೆ. ಅದರೊಂದಿಗೆ ಬಂದ ಮಣ್ಣು ಅಲ್ಲೇ ಉಳಿಯುತ್ತದೆ. ಕಟೀಲಿನಿಂದ ಬಜಪೆ ಕಡೆಗೆ ಹೋಗುವ ರಾಜ್ಯ ಹೆದ್ದಾರಿ 67ರ ಎಕ್ಕಾರು ಪೇಟೆಯಲ್ಲಿ ಮಳೆನೀರು ಮತ್ತು ಮಣ್ಣು ಮುಖ್ಯ ರಸ್ತೆಯ ಮೇಲೆ ತುಂಬಿಕೊಂಡು ವಾಹನ ಸವಾರರಿಗೆ ತೊಂದರೆಯಾಗುತ್ತಿದೆ.

‘ಎಕ್ಕಾರು ಪೇಟೆಯ ಭಜನಾ ಮಂದಿರದ ಸಮೀಪವೂ ರಸ್ತೆ ಮೇಲೆ ನೀರು ನಿಲ್ಲುತ್ತದೆ. ಹಲವು ವರ್ಷಗಳಿಂದ ಈ ಸಮಸ್ಯೆ ಇದ್ದರೂ ಸಂಬಂಧಪಟ್ಟವರು ಗಮನ ಹರಿಸಲಿಲ್ಲ’ ಎಂದು ಸ್ಥಳೀಯರು ದೂರುತ್ತಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.