ADVERTISEMENT

ಮಂಗಳೂರು: ಪಿಲಿಕುಳಕ್ಕೆ ಒಡಿಶಾ ಪ್ರಾಣಿಗಳು

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2024, 5:33 IST
Last Updated 6 ನವೆಂಬರ್ 2024, 5:33 IST
<div class="paragraphs"><p>ಪಿಲಿಕುಳಕ್ಕೆ ಒರಿಸ್ಸಾದಿಂದ ಬಂದಿರುವ ಪ್ರಾಣಿಗಳು</p></div>

ಪಿಲಿಕುಳಕ್ಕೆ ಒರಿಸ್ಸಾದಿಂದ ಬಂದಿರುವ ಪ್ರಾಣಿಗಳು

   

ಮಂಗಳೂರು: ನಗರದ ಹೊರವಲಯದಲ್ಲಿರುವ ಪಿಲಿಕುಳ ಮೃಗಾಲಯಕ್ಕೆ ವಿನಿಮಯ ಕಾರ್ಯಕ್ರಮದಡಿ ಒಡಿಶಾದ ನಂದನ್ ಕಾನನ್ ಮೃಗಾಲಯದಿಂದ ಕೆಲವು ಪ್ರಾಣಿಗಳನ್ನು ತರಿಸಲಾಗಿದೆ.

ಆರು ವರ್ಷದ ಏಷ್ಯಾಟಿಕ್ ಗಂಡು ಸಿಂಹ, ಒಂದು ತೋಳ, ಎರಡು ಘರಿಯಲ್ ಮೊಸಳೆ ಮತ್ತು ಅಪರೂಪದ ಪಕ್ಷಿಗಳಾದ ಎರಡು ಸಿಲ್ವರ್ ಫೆಸೆಂಟ್ ಮತ್ತು ಎರಡು ಯೆಲ್ಲೋ ಗೋಲ್ಡನ್ ಫೆಸೆಂಟ್ ಪಿಲಿಕುಳಕ್ಕೆ ಬಂದಿವೆ.

ADVERTISEMENT

ಪಿಲಿಕುಳದಿಂದ ನಾಲ್ಕು ಕಾಡು ನಾಯಿ– ಧೋಲ್, ನಾಲ್ಕು ರೇಟಿಕುಲೆಟೆಡ್ ಹೆಬ್ಬಾವು. ಎರಡು ಬ್ರಾಹಿಣಿ ಗಿಡುಗ, ಮೂರು ಏಶಿಯನ ಪಾಮ್ ಸಿವೇಟ್‌, ಎರಡು ಲಾರ್ಜ್ ಇಗರೇಟ್‌ಗಳನ್ನು ನಂದನ್ ಕಾನನ್ ಮೃಗಾಲಯಕ್ಕೆ ಕಳುಹಿಸಲಾಗುವುದು. ಪಿಲಿಕುಳದಿಂದ ರವಾನೆ ಆಗುತ್ತಿರುವ ಪ್ರಾಣಿಗಳು ಈ ಮೃಗಾಲಯದಲ್ಲೇ ಜನಿಸಿದವುಗಳಾಗಿವೆ.

ಮೃಗಾಲಯದಲ್ಲಿ ಜೊತೆಯಿಲ್ಲದ ಪ್ರಾಣಿಗಳಿಗೆ ಜೊತೆಗಾಗಿ ಮತ್ತು ಶುದ್ಧ ರಕ್ತ ಸಂಬಂಧಗಳನ್ನು ಉಳಿಸಿಕೊಳ್ಳಲು ಪ್ರಾಣಿ ವಿನಿಮಯ ಕಾರ್ಯಕ್ರ ಮಾಡಲಾಗುತ್ತದೆ. ಪಿಲಿಕುಳದಲ್ಲಿ ಮೂರು ಸಿಂಹಗಳಿದ್ದು ಇವಗಳಿಗೆ ಜೊತೆಗಾರನಾಗಿ ಒಂದು ಗಂಡು ಏಷ್ಯಾಟಿಕ್ ಸಿಂಹವನ್ನು ತರಿಸಲಾಗಿದೆ. ಏಷ್ಯಾಟಿಕ್ ಗಂಡು ಸಿಂಹಗಳ ಸಂಖ್ಯೆ ಭಾರತದ ಮೃಗಾಲಯಗಳಲ್ಲಿ ಕಡಿಮೆ ಇರುವುದರಿಂದ ನಂದನ್ ಕಾನನ್ ಮೃಗಾಲಯದಿಂದ ತರಿಸಲಾಗಿದೆ.

ಪಿಲಿಕುಳ ಮೃಗಾಲಯವು ಸುಮಾರು 1,200ಕ್ಕೂ ಹೆಚ್ಚು ಪ್ರಾಣಿ, ಪಕ್ಷಿ ಮತ್ತು ಉರಗಗಳನ್ನು ಹೊಂದಿದ್ದು ದೇಶದ 18 ಬೃಹತ್ ಮೃಗಾಲಯಗಳಲ್ಲಿ ಒಂದಾಗಿದೆ.

ಹೊಸದಾಗಿ ಬಂದಿರುವ ಪ್ರಾಣಿ ಪಕ್ಷಿಗಳನ್ನು ಅಗತ್ಯ ಚುಚ್ಚುಮದ್ದು ಮತ್ತು ಚಿಕಿತ್ಸೆ ನೀಡಿ ಇಲ್ಲಿಯ ಪರಿಸರಕ್ಕೆ ಹೊಂದಿಕೊಳ್ಳಲು ಅನುಕೂಲವಾಗುವಂತೆ ಸುಮಾರು 15 ದಿನಗಳವರೆಗೆ ಆರೈಕೆ ಕೇಂದ್ರದಲ್ಲಿ ಇರಿಸಿ ನಂತರ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಮೃಗಾಲಯದ ನಿರ್ದೇಶಕ ಎಚ್. ಜಯಪ್ರಕಾಶ್ ಭಂಡಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಿಲಿಕುಳಕ್ಕೆ ಒಡಿಶಾದಿಂದ ಬಂದಿರುವ ಪಕ್ಷಿಗಳು

ಪಿಲಿಕುಳಕ್ಕೆ ಒಡಿಶಾದಿಂದ ಬಂದಿರುವ ಪಕ್ಷಿಗಳು

ಪಿಲಿಕುಳಕ್ಕೆ ಒಡಿಶಾದಿಂದ ಬಂದಿರುವ ಮೊಸಳೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.