ADVERTISEMENT

ಆನ್‌ಲೈನ್ ಟ್ರೇಡಿಂಗ್‌: ₹ 1.26 ಕೋಟಿ ವಂಚನೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2024, 8:00 IST
Last Updated 20 ಅಕ್ಟೋಬರ್ 2024, 8:00 IST

ಮಂಗಳೂರು: ಆನ್ ಲೈನ್ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಿ ಇಲ್ಲಿನ ವ್ಯಕ್ತಿಯೊಬ್ಬರು ₹ 1.26 ಕೋಟಿ ಹಣ ಕಳೆದುಕೊಂಡಿದ್ದು, ಈ ಬಗ್ಗೆ ಸೆನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಆನ್ ಲೈನ್ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಕುರಿತು ವಾಟ್ಸ್‌ಆ್ಯಪ್‌ಗೆ ಸಂದೇಶ ಬಂದಿತ್ತು. ಅದನ್ನು ತೆರೆದಾಗ ವಿಐಪಿ ಎಚ್‌2 ಶೇರ್‌ಖಾನ್‌ ಕ್ಯಾಪಿಟಲ್‌ ಗ್ರೂಪ್‌ಗೆ ನನ್ನನ್ನು ಸೇರಿಸಿ, ನಂತರ ಒಂದು ಕೊಂಡಿ ಕಳುಹಿಸಿದ್ದರು. ಅದನ್ನು ಕ್ಲಿಕ್ಕಿಸಿ, ‘ಶೇರ್ ಖಾನ್ ಇಂಟರ್ ನ್ಯಾಷನಲ್ ಸೆಕ್ಯೂರಿಟಿಸ್ ಫ್ಲಾಟ್ ಫಾರಂ’ಗೆ ಸೇರ್ಪಡೆಯಾಗಿದ್ದೆ. ಅದರಲ್ಲಿ ಬಂದ ಸೂಚನೆ ಮೇರೆಗೆ 2024ರ ಸೆ. 1ರಿಂದ 15ರವರೆಗೆ ಹಂತ ಹಂತವಾಗಿ ₹ 25 ಲಕ್ಷ ಹಣ ಪಾವತಿಸಿದ್ದೆ. ನಂತರ ಪಿರ್ಯಾದಿದಾರರು ಹಣವನ್ನು ಹಿಂಪಡೆಯಲು ಪ್ರಯತ್ನಿಸಿದಾಗ ಅಕೌಂಟ್ ನಂಬರ್ ತಪ್ಪಾಗಿದೆ ಎಂದು ಮತ್ತೆ ₹ 35 ಲಕ್ಷ ಕಟ್ಟುವಂತೆ ಸೂಚಿಸಿದ್ದರು. ಹೀಗೆ  ನನ್ನಿಂದ ಒಟ್ಟು ₹ 1.26 ಲಕ್ಷ ಹಣ ಕಟ್ಟಿಸಿಕೊಂಡು ವಂಚನೆ ಮಾಡಿದ್ದಾರೆ ಎಂದು ಸಂತ್ರಸ್ತ ವ್ಯಕ್ತಿ ದೂರು ನೀಡಿದ್ದಾರೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT