ADVERTISEMENT

ಓಪನ್ ಸೀ ಈಜು: ಧ್ರುವ್‌, ಪೂರ್ಣಿಮಾಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 26 ಜನವರಿ 2024, 13:52 IST
Last Updated 26 ಜನವರಿ 2024, 13:52 IST
ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಗಳಿಸಿದ ಈಜುಪಟುಗಳು ಅತಿಥಿಯ ಜೊತೆ ಸಂಭ್ರಮಿಸಿದರು
ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಗಳಿಸಿದ ಈಜುಪಟುಗಳು ಅತಿಥಿಯ ಜೊತೆ ಸಂಭ್ರಮಿಸಿದರು   

ಮಂಗಳೂರು: ಧ್ರುವ್ ಪಟೇಲ್‌ ಮತ್ತು ಪೂರ್ಣಿಮಾ ಶೆಟ್ಟಿ ಶುಕ್ರವಾರ ಇಲ್ಲಿ ನಡೆದ ಮಂಗಳೂರು ಸರ್ಫ್ ಕ್ಲಬ್ ಆಶ್ರಯದ ‘ಡೆನ್ ಡೆನ್‌’ ಓ‍ಪನ್ ಸೀ ಈಜು ಸ್ಪರ್ಧೆಯ 19ರಿಂದ 34 ವರ್ಷದೊಳಗಿನವರ ವಯೋಮಾನದಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಡೆಕಾಥ್ಲಾನ್ ಮತ್ತು ವಿ ಒನ್ ಅಕ್ವಾ ಸೆಂಟರ್ ಸಹಯೋಗದಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಅಭಿಮನ್ಯು ಸಿಂಗ್ ಮತ್ತು ಆರ್ಯನ್ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಬಹುಮಾನ ಗಳಿಸಿದರು. ಮಹಿಳಾ ವಿಭಾಗದಲ್ಲಿ ಸ್ವರದಾ ಪಾಂಗು ಎರಡನೇ ಸ್ಥಾನ ಗಳಿಸಿದರು.

31ರಿಂದ 45 ವರ್ಷದವರ ವಿಭಾಗದ ಪುರುಷರ ಪ್ರಶಸ್ತಿ ಪ್ರದೀಪ್ ಕುಮಾರ್ ಅವರ ಪಾಲಾಯಿತು. ಪ್ರೀತಂ ಸಿಂಗ್ ಮತ್ತು ಸೋಹನ್ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದರು.

ADVERTISEMENT

ಇತರ ವಿಭಾಗದ ಫಲಿತಾಂಶಗಳು: 15ರಿಂದ 18 ವರ್ಷದೊಳಗಿನವರು: ಅನಿಕೇತ್‌ ಎಂ–1, ದೇವ್‌ಪ್ರಿಯ್‌ ಬೈಜು–2, ನಂದನ್‌–3; ಬಾಲಕಿಯರು: ಪಂಚಮಿ ಕಿಣಿ–1. 11ರಿಂದ 13 ವರ್ಷದೊಳಗಿನ ಬಾಲಕರು: ಸಾತ್ವಿಕ್ ನಾಯಕ್ ಸುಜೀರ್‌–1, ನೈತಿಕ್ ಎನ್‌–2, ದಕ್ಷ್‌ ಪ್ರಸಾದ್‌–3; ಬಾಲಕಿಯರು: ಶ್ರಾವ್ಯ ಕೆ–1, ಪೂರ್ವಿ ಎಂ–2, ಲಾಸ್ಯ ಕಿಶನ್‌–3. 10 ಮತ್ತು 11 ವರ್ಷದೊಳಗಿನ ಬಾಲಕರು: ಅಮಿತ್ ಪವನ್‌–1, ಸ್ನಿತಿಕ್ ಎನ್‌–2, ನಂದನ್ ಕರ್ಕೇರ–3; ಬಾಲಕಿಯರು: ದಿಯಾ ನಾಯಕ್–1, ಪ್ರಾಪ್ತಿ ಜೆ.ಪಿ–2, ದೇವಿಕಾ ಎಂ–3. 14ರಿಂದ 16 ವರ್ಷದೊಳಗಿನ ಬಾಲಕರು: ಅಲೆಸ್ಟರ್ ಸ್ಯಾಮ್ಯುಯೆಲ್ ರೇಗೊ–1, ಪ್ರತೀಕ್ ಜೆ.ಪಿ–2. 17ರಿಂದ 30 ವರ್ಷದ ಪುರುಷರು: ಮಯಾಂಕ್ ಕೊಠಾರಿ–1, ಅರ್ಚಿತ್‌–2, ಚೈತನ್ಯಾ ಕೃಷ್ಣ ಶರ್ಮಾ–3. 31ರಿಂದ 50 ವರ್ಷೊದೊಳಗಿನವರು: ಸಂಕೇತ್ ಬೆಂಗ್ರೆ–1, ಕೌಶಿಕ್ ಬೊಳೂರು–2, ಗುರುಪ್ರಸಾದ್ ಭಟ್‌–3. 46 ವರ್ಷಕ್ಕೂ ಮೇಲಿನವರು: ಪ್ರವೀಣ್–1, ಅವಿನಾಶ್‌–2, ಬಿ.ಕೆ.ನಾಯಕ್‌–3. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.