ಮೂಲ್ಕಿ(ದಕ್ಷಿಣ ಕನ್ನಡ): ಇಲ್ಲಿಗೆ ಸಮೀಪದ ಪಕ್ಷಿಕೆರೆಯಲ್ಲಿ ಪತ್ನಿ ಮತ್ತು ಮಗುವನ್ನು ಕೊಂದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಆತನ ತಾಯಿ ಹಾಗೂ ಅಕ್ಕನನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಮೃತ ಕಾರ್ತಿಕ್ ಭಟ್ ತಾಯಿ ಶ್ಯಾಮಲಾ ಮತ್ತು ಅಕ್ಕ ಕಣ್ಮಣಿ ಬಂಧಿತರು.
ಪಕ್ಷಿಕೆರೆಯ ಕಾರ್ತಿಕ್ ಭಟ್ ತನ್ನ ಪತ್ನಿ ಪ್ರಿಯಾಂಕಾ ಮತ್ತು ನಾಲ್ಕು ವರ್ಷದ ಮಗು ಹೃದಯ್ ನನ್ನು ಪಕ್ಷಿಕೆರೆಯ ಮನೆಯಲ್ಲಿ ಕೊಲೆ ಮಾಡಿ, ಚಲಿಸುತ್ತಿದ್ಧ ರೈಲಿಗೆ ತಲೆ ಕೊಟ್ಟು ಶುಕ್ರವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮೂವರ ಅಂತ್ಯಕ್ರಿಯೆ ಭಾನುವಾರ ನಡೆದಿತ್ತು.
ಕಾರ್ತಿಕ್ ಭಟ್ ಈ ಕೃತ್ಯ ನಡೆಸಿ ಆತ್ಮಹತ್ಯೆ ಮಾಡಿಕೊಳ್ಳಲು ಆತನ ತಾಯಿ ಮತ್ತು ಅಕ್ಕ ಮಾನಸಿಕ ಕಿರುಕುಳ ನೀಡಿದ್ದೇ ಕಾರಣ ಎಂದು ಆರೋಪಿಸಿ ಪ್ರಿಯಾಂಕಾ ಅವರ ತಾಯಿ ಸಾವಿತ್ರಿ ಮೂಲ್ಕಿ ಠಾಣೆಗೆ ದೂರು ನೀಡಿದ್ದರು
ಕಾರ್ತಿಕ್ ಆತ್ಮಹತ್ಯೆಗೂ ಮುನ್ನ ಬರೆದಿಟ್ಟ ಡೆತ್ ನೋಟ್ ನಲ್ಲೂ ಅಕ್ಕ ಹಾಗೂ ತಾಯಿ ವಿರುದ್ಧ ಆರೋಪ ಮಾಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.