ಮೂಲ್ಕಿ (ದಕ್ಷಿಣ ಕನ್ನಡ): ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರ ಪೂರ್ವಾಶ್ರಮದ ತಂದೆ, ಅಂಗಡಿಮಾರ್ ಕೃಷ್ಣ ಭಟ್ (102) ಅವರು ಹಳೆಯಂಗಡಿ ಸಮೀಪದ ಪಕ್ಷಿಕೆರೆಯಲ್ಲಿರುವ ಸ್ವಗೃಹದಲ್ಲಿ ಭಾನುವಾರ ರಾತ್ರಿ ನಿಧನರಾದರು.
ಪುತ್ರ ವಿಶ್ವೇಶ್ವರ ಭಟ್ ಜತೆ ವಾಸವಿದ್ದ ಅವರು ಸಾಂಪ್ರದಾಯಿಕ ಕೃಷಿಕರೂ, ವೈದಿಕ ವಿದ್ವಾಂಸರೂ ಆಗಿದ್ದರು. ತುಳು ಲಿಪಿಕಾರರು, ಪಂಚಾಂಗ ಕರ್ತೃವಾಗಿದ್ದರು. ಹಲವು ಕನ್ನಡ ಹಾಗೂ ತುಳು ಭಜನೆ, ಪ್ರಾರ್ಥನಾ ಶ್ಲೋಕಗಳನ್ನು ರಚಿಸಿದ್ದರು.
ಪೇಜಾವರ ಸ್ವಾಮೀಜಿ ಅವರು ಕೃಷ್ಣಭಟ್ ಅವರ ಎಂಟನೇ ಪುತ್ರ. ಅವರಿಗೆ ಸ್ವಾಮೀಜಿ ಸೇರಿದಂತೆ ಐವರು ಪುತ್ರರು, ಏಳು ಮಂದಿ ಪುತ್ರಿಯರು ಇದ್ದಾರೆ.
ಸೋಮವಾರ ಪಕ್ಷಿಕೆರೆಯಲ್ಲಿ ಅಂತ್ಯಕ್ರಿಯೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.