ಮಂಗಳೂರು: ಮನೆಯಲ್ಲೇ ಕೆಲಸ ಮಾಡಿ ಹೆಚ್ಚು ಹಣ ಸಂಪಾದಿಸುವ ಆಮಿಷ ವೊಡ್ಡಿ ವ್ಯಕ್ತಿಯೊಬ್ಬರಿಗೆ ₹ 23.59 ಲಕ್ಷ ವಂಚನೆ ಮಾಡಿದ ಬಗ್ಗೆ ಇಲ್ಲಿನ ಸೆನ್ ಅಪರಾಧ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
‘ನನ್ನ ವಾಟ್ಸ್‌ಆ್ಯಪ್‌ಗೆ ಸೆ. 21ರಂದು ಮನೆಯಲ್ಲೇ ಕೆಲಸ ಮಾಡಿ ಹಣ ಸಂಪಾದಿಸುವ ಜಾಹೀರಾತು ಸಂದೇಶ ಬಂದಿತ್ತು. ನನಗೆ ಆಸಕ್ತಿ ಇಲ್ಲ ಎಂದು ಪ್ರತಿಕ್ರಿಯಿಸಿದ್ದೆ. ಆದರೂ ಕೊಂಡಿಯೊಂದನ್ನು ಕಳುಹಿಸಿದ್ದರು. ರೆಸ್ಟೋರಂಟ್, ಪ್ರವಾಸಿ ತಾಣ ಹಾಗೂ ಹೋಟೆಲ್‌ಗಳನ್ನು ಲೈಕ್ ಮಾಡಿ, ಫೈವ್ ಸ್ಟಾರ್ ನೀಡಿ ಹಣ ಗಳಿಸಬಹುದು ಎಂದು ನಂಬಿಸಿದರು. ಅವರು ಟೆಲಿಗ್ರಾಂ ಆ್ಯಪ್‌ನಲ್ಲಿ ಕಳುಹಿಸಿದ್ದ ಕೊಂಡಿಯನ್ನು ಕ್ಲಿಕ್ಕಿಸಿ ಅವರು ಕಳುಹಿಸಿದ ಗ್ರೂಪ್‌ಗೆ ಸೇರಿ, ಅವರ ಸೂಚನೆ ಪಾಲಿಸಿದ್ದೆ.
ನನ್ನ ಖಾತೆಗೆ ₹ 210 ಹಾಕಿದ್ದರು. ಬಳಿಕ ಬೇರೆ ಬೇರೆ ಟಾಸ್ಕ್ ನೀಡಿ ನನ್ನಿಂದ ಬೇರೆ ಬೇರೆ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು ₹ 23.59 ಲಕ್ಷ ಕಟ್ಟಿಸಿಕೊಂಡರು. ನಂತರ ಹಣ ಮರಳಿಸದೇ ವಂಚಿಸಿದರು ಎಂದು ಸಂತ್ರಸ್ತ ವ್ಯಕ್ತಿ ದೂರು ನೀಡಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.