ADVERTISEMENT

ದೇರಳಕಟ್ಟೆ | ಆಟೋರಿಕ್ಷಾಕ್ಕೆ ಪಿಕಪ್ ಡಿಕ್ಕಿ: 9 ವರ್ಷದ ಬಾಲಕಿ ಸಾವು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 9:16 IST
Last Updated 24 ಅಕ್ಟೋಬರ್ 2024, 9:16 IST
<div class="paragraphs"><p>ಅಪಘಾತದಿಂದ ನಜ್ಜುಗುಜ್ಜಾಗಿರುವ ಆಟೊರಿಕ್ಷಾ</p></div>

ಅಪಘಾತದಿಂದ ನಜ್ಜುಗುಜ್ಜಾಗಿರುವ ಆಟೊರಿಕ್ಷಾ

   

-ಪ್ರಜಾವಾಣಿ ಚಿತ್ರ

ಮಂಗಳೂರು(ದಕ್ಷಿಣ ಕನ್ನಡ): ಉಳ್ಳಾಲ ತಾಲ್ಲೂಕಿನ ದೇರಳಕಟ್ಟೆ ರೆಂಜಾಡಿ ಬಳಿ ಕಲ್ಪದೆ ತಿರುವಿನಲ್ಲಿ ಪಿಕಪ್ ವಾಹನವು ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದು, ಬಾಲಕಿಯೊಬ್ಬಳು ಮೃತಪಟ್ಡಿದ್ದಾಳೆ.

ADVERTISEMENT

ಮೃತ ಬಾಲಕಿಯನ್ನು ಆಯಿಷಾ ವಹೀಬಾ (9 ವರ್ಷ) ಎಂದು ಗುರುತಿಸಲಾಗಿದೆ. ರಿಕ್ಷಾದಲ್ಲಿ ಇನ್ನೂ ಮೂವರು ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದು, ಅವರೂ ಗಾಯಗೊಂಡಿದ್ದಾರೆ. ಫಾತಿಮಾ ಅಲಿಫಾ, ರೂಕಿಯ ಮನ್ಹ ಮತ್ತು ಶೇಖ್ ಷಹಿಂ ಗಾಯಗೊಂಡ ಇತರ ವಿದ್ಯಾರ್ಥಿಗಳು.

ಚಾಲಕ ಮೊಹಮ್ಮದ್ ಸಾಲಿ ಎಂಬುವರು ತಮ್ಮ ಆಟೊರಿಕ್ಷಾದಲ್ಲಿ ವಿದ್ಯಾರ್ಥಿಗಳನ್ನು ಶಾಲೆಗೆ ಕರೆದೊಯ್ತುತ್ತಿದ್ದರು. ದೇರಳಕಟ್ಟೆ ರೆಂಜಾಡಿ ಕೆಡೆಯಿಂದ ಕಲ್ಪದೆ ಕಡೆಗೆ ಸಾಗುತ್ತಿದ್ದಾಗ ಕಲ್ಪದೆ ತಿರುವಿನಲ್ಲಿ ಎದುರಿನಿಂದ ಬಂದ ಪಿಕಪ್ ವಾಹನ ರಿಕ್ಷಾಕ್ಕೆ‌ ಡಿಕ್ಕಿಹೊಡೆದಿತ್ತು‌. ಪಿಕಪ್ ವಾಹನವು ಕಲ್ಪದೆ ಕಡೆಯಿಂದ ರೆಂಜಾಡಿ ದೇರಳಕಟ್ಟೆ ಕಡೆಗೆ ಸಾಗುತ್ತಿತ್ತು.

ಅಪಘಾತದಿಂದಾಗಿ ರಿಕ್ಷಾವು ಉರುಳಿದ್ದರಿಂದ ಆಯಿಷಾ ರಸ್ತೆಗೆ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಪಿಕಪ್ ವಾಹನ ಚಾಲಕ ಮೊಹಮ್ಮದ್ ಆಷ್ಪಾಕ್ ಅವರು ದೇರಳಕಟ್ಟೆಯ ನಿಟ್ಟೆ ಕೆ. ಎಸ್. ಹೆಗ್ಡೆ ಆಸ್ಪತ್ರೆಗೆ ಕರೆದೊಯ್ದರು. ಅಷ್ಟರಲ್ಲೇ ಬಾಲಕಿ ಆಯಿಷಾ ಕೊನೆಯುಸಿರೆಳೆದಿದ್ದರು.

ಗಾಯಗೊಂಡಿದ್ದ ಉಳಿದ ಮಕ್ಕಳು ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಈ ಬಗ್ಗೆ ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯಾರ್ಥಿನಿ ಅಪಘಾತದಲ್ಲಿ ಮೃತಪಟ್ಟಿದ್ದರಿಂದ, ಅಕೆ ಕಲಿಯುತ್ತಿದ್ದ ದೇರಳಕಟ್ಟೆಯ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರಜೆ ಸಾರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.