ADVERTISEMENT

ಆಳ್ವಾಸ್ ವಿರಾಸತ್ ಪ್ರಶಸ್ತಿಗೆ ಪಂ. ವೆಂಕಟೇಶ್ ಕುಮಾರ್‌ ಆಯ್ಕೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 19:08 IST
Last Updated 27 ಅಕ್ಟೋಬರ್ 2024, 19:08 IST
ಪಂ.ವೆಂಕಟೇಶ್‌ ಕುಮಾರ್‌
ಪಂ.ವೆಂಕಟೇಶ್‌ ಕುಮಾರ್‌   

ಮೂಡುಬಿದಿರೆ (ದಕ್ಷಿಣ ಕನ್ನಡ): ಹಿಂದೂಸ್ಥಾನಿ ಗಾಯಕ ಪಂಡಿತ್ ಎಂ.ವೆಂಕಟೇಶ್ ಕುಮಾರ್ ಅವರನ್ನು 2024ನೇ ಸಾಲಿನ ‘ಆಳ್ವಾಸ್ ವಿರಾಸತ್’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ.

ನಾಡು ನುಡಿಯ ರಾಷ್ಟ್ರೀಯ ಸಾಂಸ್ಕೃತಿಕ ವೈಭವ ಆಳ್ವಾಸ್ ವಿರಾಸತ್ ಕಾರ್ಯಕ್ರಮವು ಇಲ್ಲಿ 2024ರ ಡಿ.1ರಿಂದ 16ರವರೆಗೆ ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಬಳ್ಳಾರಿಯ ಲಕ್ಷ್ಮೀಪುರದಲ್ಲಿ ಜನಿಸಿದ ವೆಂಕಟೇಶ್ ಕುಮಾರ್‌ ಅವರಿಗೆ ಜಾನಪದ ಗಾಯಕರಾಗಿದ್ದ ತಂದೆ ಹುಲೆಗಪ್ಪ ಅವರೇ ಮೊದಲ ಗುರು. ಬಳಿಕ ಪುಟ್ಟರಾಜ ಗವಾಯಿಗಳಿಂದ ಗ್ವಾಲಿಯರ್ ಮತ್ತು ಕಿರಾಣಾ ಘರಾಣ ಶೈಲಿಯ ಗಾಯನವನ್ನು ಅಭ್ಯಾಸ ಮಾಡಿದರು.  ಮಧುರ ಧ್ವನಿಯ ಗಾಯಕರಾದ ಇವರು ಸಾಂಪ್ರದಾಯಿಕ ಮತ್ತು ಭಕ್ತಿ ಸಂಗೀತ ಕ್ಷೇತ್ರದ ಅದ್ವಿತೀಯ ಪ್ರತಿಭೆ. ದೇಶ-ವಿದೇಶಗಳಲ್ಲಿ ಸಂಗೀತ ಕಛೇರಿ ನೀಡಿರುವ ಹಿರಿಮೆ ಇವರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT