ಮಂಗಳೂರು: ಈ ವರ್ಷದ ಮೊದಲ ವಿದೇಶಿ ವಿಹಾರ ನೌಕೆಗೆ (ಕ್ರೂಸ್) ಶುಕ್ರವಾರ ನವ ಮಂಗಳೂರು ಬಂದರಿನಲ್ಲಿ ಸ್ವಾಗತಿಸಲಾಯಿತು.
ನಗರದ ವಿವಿಧೆಡೆಗೆ ಭೇಟಿ ನೀಡಿದ ವಿದೇಶಿ ಪ್ರವಾಸಿಗರು ಪಾಂಡೇಶ್ವರದಲ್ಲಿರುವ ಮಂಗಳೂರು ಪ್ರಧಾನ ಅಂಚೆ ಕಚೇರಿಗೆ ಭೇಟಿ ನೀಡಿ, ಭಾರತದ ಅಂಚೆ ಚೀಟಿಗಳ ಬಗ್ಗೆ ಮಾಹಿತಿ ಪಡೆದರು. ಆಸ್ಟ್ರೇಲಿಯಾ, ಸ್ಪೇನ್, ಅಮೆರಿಕ, ನ್ಯೂಯಾರ್ಕ್‌ನ ಪ್ರವಾಸಿಗರು ಈ ತಂಡದಲ್ಲಿದ್ದರು. ಪ್ರಧಾನ ಅಂಚೆ ಕಚೇರಿಯಲ್ಲಿರುವ ಫಿಲಾಟೆಲಿಕ್ ಬ್ಯುರೊಗೆ ಭೇಟಿ ನೀಡಿದ ಅವರಿಗೆ ಅಂಚೆ ಕಚೇರಿಯ ದೀಪಾ ಅವರು ಸಮಗ್ರ ಮಾಹಿತಿ ನೀಡಿದರು.
ಪ್ರವಾಸಿಗರು ಅಂಚೆ ಕಚೇರಿಯ ಕಾರ್ಯ ನಿರ್ವಹಣೆಯನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ವಿದೇಶಿಗರು, ಇಲ್ಲಿಂದಲೇ ಅವರ ಅಂಚೆ ಕಾರ್ಡ್‌ಗಳನ್ನು ಪೋಸ್ಟ್ ಮಾಡಿದರು.
ವರಿಷ್ಠ ಅಂಚೆ ಪಾಲಕ ಶ್ರೀನಾಥ್ ಬಸ್ರೂರು ಅವರು ವಿದೇಶಿ ಪ್ರವಾಸಿಗರನ್ನು ಸ್ವಾಗತಿಸಿ ಅವರಿಗೆ ಅಂಚೆ ಕಚೇರಿಯ ಸೇವೆಗಳ ಬಗ್ಗೆ ತಿಳಿಸಿದರು. ವಿದೇಶಿ ಪ್ರವಾಸಿಗರಿಗೆ ಭಾರತೀಯ ಅಂಚೆಯ ಬಗ್ಗೆ ಹೆಚ್ಚು ಮಾಹಿತಿ ನೀಡುವ ವಿಶೇಷ ಕಿಟ್ ಅನ್ನು ಫಿಲಾಟೆಲಿಕ್ ಬ್ಯುರೊದಲ್ಲಿ ಇಡಲಾಗಿದೆ ಎಂದು ಅಂಚೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.