ADVERTISEMENT

ಸುಬ್ರಹ್ಮಣ್ಯ: ದೇವರಿಗೆ ₹75 ಲಕ್ಷ ಮೌಲ್ಯದ ಚಿನ್ನದ ಪ್ರಭಾವಳಿ ಸಮರ್ಪಣೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2024, 20:48 IST
Last Updated 24 ಫೆಬ್ರುವರಿ 2024, 20:48 IST
ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಚಿನ್ನದ ಪ್ರಭಾವಳಿ ಸರ್ಪಿಸಲಾಯಿತು
ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಚಿನ್ನದ ಪ್ರಭಾವಳಿ ಸರ್ಪಿಸಲಾಯಿತು   

ಸುಬ್ರಹ್ಮಣ್ಯ: ಮಹಾತೋಭಾರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆಲಂಗಾಣದ ಉದ್ಯಮಿ ಎ.ಮಹೇಶ್ ರೆಡ್ಡಿ ಅವರು ಶನಿವಾರ ಚಿನ್ನದ ಪ್ರಭಾವಳಿ ಸಮರ್ಪಿಸಿದರು.

ದೇವಳದ ಬ್ರಹ್ಮಕಲಶೋತ್ಸವ ದಿನದ ಪ್ರಯುಕ್ತ ದೇವಾಲಯಕ್ಕೆ ₹ 4 ಲಕ್ಷ ವೆಚ್ಚದಲ್ಲಿ ಹೂವಿನ ಅಲಂಕಾರ ಮಾಡಿಸಿದರು.

ಪ್ರಾರ್ಥನೆ ಸಲ್ಲಿಸಿ, ಪ್ರಭಾವಳಿ ಸಮರ್ಪಿಸಿದ ಮಹೇಶ್ ಹಾಗೂ ರಾಧಿಕಾ ದಂಪತಿಯನ್ನು ಗೌರವಿಸಲಾಯಿತು.

ADVERTISEMENT

ಪ್ರಭಾವಳಿಯು 1.20 ಕೆ.ಜಿ. ಚಿನ್ನ ಹಾಗೂ 3.20 ಕೆ.ಜಿ. ಬೆಳ್ಳಿಯನ್ನು ಹೊಂದಿದ್ದು, ₹ 75 ಲಕ್ಷ ವೆಚ್ಚವಾಗಿದೆ. ಬೆಂಗಳೂರಿನ ರಾಜೇಶ್ವರಿ ನಗರದ ಶಿಲ್ಪಿಗಳಾದ ಅಲಗ್ ರಾಜ್ ಸ್ಥಪತಿ ಪದ್ಮಲಯ ಆರ್ಟ್‌ ಹಾಗೂ ಕ್ರಾಫ್ಟ್ ಸಂಸ್ಥೆಯಲ್ಲಿ ತಯಾರಿಸಲಾಗಿದೆ. ಮಹೇಶ್ ರೆಡ್ಡಿ ಅವರು ದೇವಳದ ಒಳಾಂಗಣಕ್ಕೆ ಬೆಳ್ಳಿ ರಥ ನೀಡುವುದಾಗಿ ತಿಳಿಸಿದ್ದಾರೆ.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್‌ರಾಂಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ, ಸದಸ್ಯರಾದ ಪಿ.ಜಿ.ಎಸ್.ಎನ್.ಪ್ರಸಾದ್, ಮನಮೋಹನ್ ರೈ, ಶ್ರೀವತ್ಸ, ವನಜಾ ವಿ.ಭಟ್, ಪ್ರಸನ್ನ ದರ್ಬೆ, ಶೋಭಾ ಗಿರಿಧರರ್, ಲೋಕೇಶ್ ಮುಂಡೋಕಜೆ, ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಸತೀಶ್ ಕೂಜುಗೋಡು ಭಾಗವಹಿಸಿದ್ದರು.

ಚಿನ್ನದ ಪ್ರಭಾವಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.