ADVERTISEMENT

ನನ್ನ ಗಂಡನಿಗೆ ಆದ ಗತಿ ಇನ್ಯಾರಿಗೂ ಆಗೋದು ಬೇಡ: ಪ್ರವೀಣ್ ನೆಟ್ಟಾರು ಪತ್ನಿ

ಬೆಳ್ಳಾರೆಯಲ್ಲಿ ಆಸ್ಪತ್ರೆ ಇದ್ದರೆ ಬದುಕುತ್ತಿದ್ದರು...

ಲೋಕೇಶ್‌ ಪೆರ್ಲಂಪಾಡಿ
Published 29 ಜುಲೈ 2022, 0:56 IST
Last Updated 29 ಜುಲೈ 2022, 0:56 IST
ಬೆಳ್ಳಾರೆಯಲ್ಲಿರುವ ಪ್ರವೀಣ್‌ ಅವರ ಮನೆಗೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿದರು. ಪ್ರವೀಣ್‌ ಅವರ ಪತ್ನಿ ನೂತನಾ, ತಾಯಿ ರತ್ನಾವತಿ ಅವರಿಗೆ ಸಾಂತ್ವಾನ ಹೇಳಿದರು,
ಬೆಳ್ಳಾರೆಯಲ್ಲಿರುವ ಪ್ರವೀಣ್‌ ಅವರ ಮನೆಗೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿದರು. ಪ್ರವೀಣ್‌ ಅವರ ಪತ್ನಿ ನೂತನಾ, ತಾಯಿ ರತ್ನಾವತಿ ಅವರಿಗೆ ಸಾಂತ್ವಾನ ಹೇಳಿದರು,   

ಸುಳ್ಯ (ದಕ್ಷಿಣ ಕನ್ನಡ): ‘ಇಂತಹ ಘಟನೆ ಮರುಕಳಿಸಬಾರದು. ನಾನು ಧೈರ್ಯದಿಂದ ಇದ್ದೇನೆ. ನನ್ನ ಗಂಡನಿಗೆ ಆದ ಗತಿ ಬೇರೆ ಯಾರಿಗೂ ಆಗಬಾರದು’

ಇದು ಮೃತ ಪ್ರವೀಣ್ ನೆಟ್ಟಾರು ಅವರ ಪತ್ನಿ ನೂತನಾ ಅವರು, ತಮ್ಮ ಮನೆಗೆ ಬಂದಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಬೇಡಿಕೊಂಡ ಪರಿ.

ಶಿಕ್ಷೆ ನೀಡಿ: ಈ ಕೃತ್ಯದ ಹಿಂದೆ ಅನೇಕರು ಇದ್ದಾರೆ. ಅವರೆಲ್ಲರನ್ನೂ ಪತ್ತೆ ಮಾಡಿ ಎಲ್ಲರಿಗೂ ಶಿಕ್ಷೆ ನೀಡಬೇಕು. ಜಾಮೀನು ನೀಡಲು ಹೋದವರಿಗೂ ಶಿಕ್ಷೆ ಆಗಬೇಕು. ಕೊಲೆ ಮಾಡಿದವರಿಗೆ ಗಲ್ಲು ಶಿಕ್ಷೆ ಆಗಬೇಕು ಎಂದು ನೂತನ ಆಗ್ರಹಿಸಿದರು. ಘಟನೆ ನಡೆದು ತುಂಬಾ ಹೊತ್ತು ತನಕ ಪ್ರವೀಣ್‌ ಉಸಿರಾಡುತ್ತಿದ್ದರು. ಒಂದು ವೇಳೆ ಬೆಳ್ಳಾರೆಯಲ್ಲೇ ಸುಸಜ್ಜಿತ ಆಸ್ಪತ್ರೆ ಇರುತ್ತಿದ್ದರೆ ಅವರು ಉಳಿಯುತ್ತಿದ್ದರು. ನನ್ನ ಗಂಡನ ನೆನಪಿಗಾದರೂ ಇಲ್ಲೊಂದು ಸುಸಜ್ಜಿತ ಆಸ್ಪತ್ರೆ ಮಾಡಿ ಸರ್ ಎಂದು ವಿನಂತಿಸಿದರು.

ADVERTISEMENT

‘ನಿಮ್ಮ ಬೇಡಿಕೆ ಈಡೇರಿಸುತ್ತೇವಮ್ಮ’ ಎಂದು ಬೊಮ್ಮಾಯಿ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.