ADVERTISEMENT

ಸಿಟಿ ಬಸ್‌ಗಳ ಸ್ಥಳಾಂತರ: ವ್ಯಾಪಾರಿಗಳ ಒಕ್ಕೂಟದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2023, 4:05 IST
Last Updated 22 ಡಿಸೆಂಬರ್ 2023, 4:05 IST
ಸ್ಟೇಟ್ ಬ್ಯಾಂಕ್ ಪರಿಸರದ ವ್ಯಾಪಾರಿಗಳ ಸೌಹಾರ್ದ ಒಕ್ಕೂಟ ವತಿಯಿಂದ ಮಂಗಳೂರಿನ ರಾವ್‌ ಆ್ಯಂಡ್ ರಾವ್ ವೃತ್ತದ ಸಮೀಪ ಗುರುವಾರ ಪ್ರತಿಭಟನೆ ನಡೆಯಿತು 
ಸ್ಟೇಟ್ ಬ್ಯಾಂಕ್ ಪರಿಸರದ ವ್ಯಾಪಾರಿಗಳ ಸೌಹಾರ್ದ ಒಕ್ಕೂಟ ವತಿಯಿಂದ ಮಂಗಳೂರಿನ ರಾವ್‌ ಆ್ಯಂಡ್ ರಾವ್ ವೃತ್ತದ ಸಮೀಪ ಗುರುವಾರ ಪ್ರತಿಭಟನೆ ನಡೆಯಿತು    

ಮಂಗಳೂರು: ನಗರದ ಸ್ಟೇಟ್‍ ಬ್ಯಾಂಕ್ ಸರ್ಕಲ್‍ನಿಂದ ಸಿಟಿ ಬಸ್‌ಗಳನ್ನು ಸರ್ವಿಸ್ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಿರುವುದರಿಂದ ಸುತ್ತಲಿನ ವ್ಯಾಪಾರಿಗಳಿಗೆ ನಷ್ಟವಾಗುತ್ತಿದ್ದು, ಹಿಂದಿನ ವ್ಯವಸ್ಥೆಯನ್ನು ಮರು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಸ್ಟೇಟ್ ಬ್ಯಾಂಕ್ ಪರಿಸರದ ವ್ಯಾಪಾರಿಗಳ ಸೌಹಾರ್ದ ಒಕ್ಕೂಟ ವತಿಯಿಂದ ಗುರುವಾರ ಪ್ರತಿಭಟನೆ ನಡೆಯಿತು.

ಕಾರ್ಮಿಕ ಮುಖಂಡ ಐವನ್ ಡಿಸೋಜ ಮಾತನಾಡಿ, ‘ಸಿಟಿ ಬಸ್‌ಗಳನ್ನು ಸರ್ವಿಸ್ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಿದ್ದರಿಂದ ವ್ಯಾಪಾರಿಗಳಿಗೆ ನಷ್ಟವಾಗಿ ಅಂಗಡಿ ಮುಚ್ಚುವ ಪರಿಸ್ಥಿತಿ ಬಂದಿದೆ. ಅಲ್ಲದೆ, ಸಾರ್ವಜನಿಕರಿಗೂ ಹೊಸ ವ್ಯವಸ್ಥೆ ಅನನುಕೂಲವಾಗಿದ್ದು, ಮೊದಲಿನಂತೆ ಬಸ್ ಸಂಚಾರ ಮುಂದುವರಿಸಬೇಕು’ ಎಂದರು. 

ಜಿಲ್ಲಾ ಕಾರ್ಮಿಕ ಪರಿಷತ್ ಅಧ್ಯಕ್ಷ ಜಯ ಶೆಟ್ಟಿ, ಉಪಾಧ್ಯಕ್ಷ ಮಹಮ್ಮದ್ ಇಕ್ಬಾಲ್, ಪ್ರಮುಖರಾದ ನಾಗರಾಜ್, ಹಮೀದ್ ಷಾ, ಮೋಹನ್ ದಾಸ್ ರೈ, ಮಹಮ್ಮದ್ ಆಸೀಫ್, ನವೀನ್ ಡಿಸೋಜ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.